ಉಭಯ ನಾಯಕರು ಭಯೋತ್ಪಾದನೆ, ವ್ಯಾಪಾರ ಮತ್ತು ರಕ್ಷಣೆ ಕುರಿತಂತೆ ಚರ್ಚಿಸಿದ್ದು, ದ್ವಿರಾಷ್ಟ್ರಗಳ ಸ್ನೇಹ, ವಾಣಿಜ್ಯ ವ್ಯವಹಾರ ಮತ್ತಿತ್ತರ ಸಂಬಂಧ ಮತ್ತಷ್ಟು ಉತ್ತಮಗೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದ್ದಾರೆ.
ನವದೆಹಲಿ(ಜ.25): ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ 4 ದಿನದ ನಂತರ ಅಂದರೆ ಮಂಗಳವಾರ ರಾತ್ರಿ ಸುಮಾರು 11.30ರ ಸುಮಾರಿನಲ್ಲಿ ಮೋದಿಯವರಿಗೆ ಟ್ರಂಪ್ ಕರೆ ಮಾಡಿದ್ದರು. ಭಾರತವು ತಮ್ಮ ದೇಶದ ನಿಜವಾದ ಸ್ನೇಹಿತ ರಾಷ್ಟ್ರ ಎಂದು ಬಣ್ಣಿಸಿದ ಅವರು ಇದೇ ಸಂದರ್ಭದಲ್ಲಿ ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದು, ನಾವು ನಿಮ್ಮನ್ನು ಬರ ಮಾಡಿಕೊಳ್ಳಲು ಉತ್ಸುಕರಾಗಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಉಭಯ ನಾಯಕರು ಭಯೋತ್ಪಾದನೆ, ವ್ಯಾಪಾರ ಮತ್ತು ರಕ್ಷಣೆ ಕುರಿತಂತೆ ಚರ್ಚಿಸಿದ್ದು, ದ್ವಿರಾಷ್ಟ್ರಗಳ ಸ್ನೇಹ, ವಾಣಿಜ್ಯ ವ್ಯವಹಾರ ಮತ್ತಿತ್ತರ ಸಂಬಂಧ ಮತ್ತಷ್ಟು ಉತ್ತಮಗೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದ್ದಾರೆ. ಇದರ ಜೊತೆ ಚೀನಾದ ಪ್ರಾಬಲ್ಯವಿರುವ ದಕ್ಷಿಣ ಮತ್ತು ಮಧ್ಯ ಏಷ್ಯಾದ ರಕ್ಷಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿದ್ದಾರೆ.
