ಜಾಗತಿಕ ಸಮುದಾಯಕ್ಕೆ ಸಡ್ಡು ಹೊಡೆದು, ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿರುವ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಹಾಗೂ ಅದನ್ನು ಮಟ್ಟ ಹಾಕಲು ಯತ್ನಿಸುತ್ತಿರುವ ಅಮೆರಿಕ ನಡುವೆ ಮತ್ತೊಮ್ಮೆ ‘ರ್ಜರಿ ವಾಕ್ಸಮರ ನಡೆದಿದ್ದು, ಯುದ್ಧದ ದಟ್ಟ ಕಾರ್ಮೋಡ ಆವರಿಸಿದೆ. ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಮಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಅಮೆರಿಕದ ಮೇಲೆ ರಾಕೆಟ್ ಉಡಾವಣೆ ಮಾಡುವುದು ನಮಗೆ ಅನಿವಾರ್ಯ’ ಎಂದು ಅಮೆರಿಕ ನೆಲದಲ್ಲೇ ಅದೂ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲೇ ಉತ್ತರ ಕೊರಿಯಾದ ವಿದೇಶಾಂಗ ಸಚಿವ ರಿ ಯೊಂಗ್ ಹೋ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆ/ನ್ಯೂಯಾರ್ಕ್(ಸೆ.25): ಜಾಗತಿಕ ಸಮುದಾಯಕ್ಕೆ ಸಡ್ಡು ಹೊಡೆದು, ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿರುವ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಹಾಗೂ ಅದನ್ನು ಮಟ್ಟ ಹಾಕಲು ಯತ್ನಿಸುತ್ತಿರುವ ಅಮೆರಿಕ ನಡುವೆ ಮತ್ತೊಮ್ಮೆ ‘ರ್ಜರಿ ವಾಕ್ಸಮರ ನಡೆದಿದ್ದು, ಯುದ್ಧದ ದಟ್ಟ ಕಾರ್ಮೋಡ ಆವರಿಸಿದೆ. ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಮಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಅಮೆರಿಕದ ಮೇಲೆ ರಾಕೆಟ್ ಉಡಾವಣೆ ಮಾಡುವುದು ನಮಗೆ ಅನಿವಾರ್ಯ’ ಎಂದು ಅಮೆರಿಕ ನೆಲದಲ್ಲೇ ಅದೂ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲೇ ಉತ್ತರ ಕೊರಿಯಾದ ವಿದೇಶಾಂಗ ಸಚಿವ ರಿ ಯೊಂಗ್ ಹೋ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಆದರೆ, ಇದಕ್ಕೆ ತಿರುಗೇಟು ನೀಡಿರುವ ಟ್ರಂಪ್, ‘ಉತ್ತರ ಕೊರಿಯಾ ಹೆಚ್ಚು ದಿನ ಇರುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಉತ್ತರ ಕೊರಿಯಾದ ಪೂರ್ವ ಕರಾವಳಿಯಲ್ಲಿ 21ನೇ ಶತಮಾನದಲ್ಲಿ ಇದೇ ಮೊದಲ ಬಾರಿಗೆ ಬಾಂಬ್ ಹೊತ್ತ ವಿಮಾನಗಳನ್ನು ಹಾರಾಡಿಸುವ ಮೂಲಕ ಆ ದೇಶಕ್ಕೆ ಅಮೆರಿಕ ಗಂಭೀರ ಎಚ್ಚರಿಕೆ ನೀಡಿದೆ.

ರಾಕೆಟ್ ದಾಳಿ ಅನಿವಾರ್ಯ: ನ್ಯೂಯಾಕ್ ನರ್ಲ್ಲಿರುವ ವಿಶ್ವಸಂಸ್ಥೆ ಕಚೇರಿಯಲ್ಲಿ ನಡೆದ ಸಾಮಾನ್ಯ ಅಧಿವೇಶನದಲ್ಲಿ ಮಾತನಾಡಿದ ಕೊರಿಯಾ ವಿದೇಶಾಂಗ ಮಂತ್ರಿ ರಿ ಯೊಂಗ್ ಹೋ, ‘ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಪದೇಪದೇ ‘ರಾಕೆಟ್ ಮ್ಯಾನ್’ ಎಂದು ಕರೆಯುವ ಮೂಲಕ ಟ್ರಂಪ್ ಅವಮಾನ ಮಾಡಿದ್ದಾರೆ. ಹೀಗಾಗಿ ಅಮೆರಿಕ ನೆಲದ ಮೇಲೆ ರಾಕೆಟ್ ದಾಳಿ ಮಾಡುವುದು ನಮಗೆ ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಅಂತಿಮ ಹಂತದಲ್ಲಿದ್ದೇವೆ. ವಿಶ್ವಸಂಸ್ಥೆ ಹೇರಿದ ದಿಗ್ಬಂಧನದಿಂದ ಅಮೆರಿಕ ಮೇಲೆ ದಾಳಿ ನಡೆಸುವ ಕ್ಷಿಪಣಿ ಅಭಿವೃದ್ಧಿಪಡಿಸುವ ನಮ್ಮ ಯೋಜನೆಗೆ ಏನೂ ತೊಂದರೆಯಾಗದು’ ಎಂದು ಹೇಳಿದರು.

ಈ ಹೇಳಿಕೆಗೆ ತಿರುಗೇಟು ನೀಡಿದ ಟ್ರಂಪ್, ‘ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಭಿಪ್ರಾಯಗಳನ್ನೇ ಆ ದೇಶದ ವಿದೇಶಾಂಗ ಮಂತ್ರಿ ವ್ಯಕ್ತಪಡಿಸಿದ್ದಾರೆ ಎಂದಾದಲ್ಲಿ, ಉತ್ತರ ಕೊರಿಯಾ ಹೆಚ್ಚು ದಿನ ಇರುವುದಿಲ್ಲ’ ಎಂದು ಟ್ವೀಟರ್ ಮೂಲಕ ತೀಕ್ಷ್ಣ ಎಚ್ಚರಿಕೆ ನೀಡಿದರು.

ಬಾಂಬರ್‌ಗಳ ಹಾರಾಟ:

ಅಮೆರಿಕ- ಉತ್ತರ ಕೊರಿಯಾ ನಡುವಣ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವಾಗಲೇ ಬಾಂಬ್ ಹೊತ್ತ ಅಮೆರಿಕದ ವಿಮಾನಗಳು ಉತ್ತರ ಕೊರಿಯಾದ ಪೂರ್ವ ಕರಾವಳಿಯಲ್ಲಿ ಹಾರಾಟ ನಡೆಸಿವೆ. ಪೆಸಿಫಿಕ್ ಸಾಗರದಲ್ಲಿರುವ ಅಮೆರಿಕ ದ್ವೀಪದಿಂದ ಹೊರಟ ಅಮೆರಿಕ ವಾಯುಪಡೆಯ ಬಿ-1ಬಿ ಲ್ಯಾನ್ಸರ್ ವಿಮಾನವು ಜಪಾನ್‌'ನ ಒಕಿನಾವಾದಿಂದ ಹೊರಟ ಎಫ್-15ಸಿ ಈಗಲ್ ಫೈಟರ್ ಜತೆಗೂಡಿ ಹಾರಾಟ ನಡೆಸಿದೆ. ನಿಶಸ್ತ್ರೀಕರಣ ವಲಯವನ್ನೂ ದಾಟಿ ಉತ್ತರ ದಿಕ್ಕಿನವರೆಗೆ ಈ ವಿಮಾನಗಳು ಹಾರಾಟ ನಡೆಸಿವೆ. ಈ ಪ್ರದೇಶದಲ್ಲಿ ಅಮೆರಿಕ ವಿಮಾನಗಳು ಹಾರಾಡಿದ್ದು ೨೧ನೇ ಶತಮಾನದಲ್ಲಿ ಇದೇ ಮೊದಲು.

ಪ್ರತಿಭಟನೆ:

ಏತನ್ಮಧ್ಯೆ ಅಮೆರಿಕದ ಯುದ್ಧ ಬೆದರಿಕೆ ವಿರುದ್ಧ ಉತ್ತರ ಕೊರಿಯಾದಲ್ಲಿ ಶನಿವಾರ ಪ್ರತಿಭಟನೆಗಳು ನಡೆದಿವೆ ಎಂದು ಅಲ್ಲಿನ ಸರ್ಕಾರಿ ಟೀವಿ ವಾಹಿನಿಯು ವಿಡಿಯೋಗಳನ್ನು ಪ್ರಸಾರ ಮಾಡಿದೆ.