ಪ್ರ್ಯಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್ ಎಂಬ ಮಾತಿದೆ. ಈ ಮಾತು ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ನಿಜವಾಗಿದೆ. ಇವರ ಕೆಲವು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇವುಗಳಲ್ಲಿ ಟ್ರಂಪ್ ಭಾಷಣವನ್ನು ಕಾರಿನಲ್ಲಿ ಕುಳಿತು ಅಭ್ಯಾಸ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ವಾಷಿಂಗ್ಟನ್(ಮಾ.06): ಪ್ರ್ಯಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್ ಎಂಬ ಮಾತಿದೆ. ಈ ಮಾತು ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ನಿಜವಾಗಿದೆ. ಇವರ ಕೆಲವು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇವುಗಳಲ್ಲಿ ಟ್ರಂಪ್ ಭಾಷಣವನ್ನು ಕಾರಿನಲ್ಲಿ ಕುಳಿತು ಅಭ್ಯಾಸ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ವಾಸ್ತವವಾಗಿ ಕಳೆದ ಬುಧವಾರ ಅಮೆರಿಕನ್ ಕಾಂಗ್ರೆಸ್'ನ್ನುದ್ದೇಶಿಸಿ ಟ್ರಂಪ್ ತನ್ನ ಮೊದಲ ಬಾರಿ ಭಾಷಣ ಮಾಡಿದ್ದರು. ಆದರೆ ಈ ಕಾರ್ಯಕ್ರಮ ಆರಂಭವಾಗುವ ಕೆಲ ಸಮಯದ ಮೊದಲು ಅವರು ತಮ್ಮ ಕಾರಿನಲ್ಲಿ ಕುಳಿತು ಈ ಭಾಷಣವನ್ನು ಅಭ್ಯಸಿಸುವುದು ಮಾಧ್ಯಮದ ಕಣ್ಣಿಗೆ ಬಿದ್ದಿದೆ. ಅಮೆರಿಕಾದ ಅಧ್ಯಕ್ಷ ಟ್ರಂಪ್ ಭಾಷಣವನ್ನು ಅಭ್ಯಸ ಮಾಡಿದ ರೀತಿ ಕಂಡರೆ ವಿದ್ಯಾರ್ಥಿಗಳು ಭಯಬಿದ್ದು ಪರೀಕ್ಷೆಗೆ ತಯಾರಾಗುವಂತೆ ಕಂಡು ಬರುತ್ತದೆ.
ಇನ್ನು ಈ ಭಾಷಣದಲ್ಲಿ ಟ್ರಂಪ್ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದ್ದರು ಅಲ್ಲದೇ ಮಾಜಿ ಅಧ್ಯಕ್ಷ ೊಬಾಮಾ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂಬುವುದು ಗಮನಾರ್ಹ
