ಬಿಜೆಪಿಗೆ ಟಾಂಗ್ ಕೊಟ್ಟಿದ್ದ ಗಡ್ಕರಿಯನ್ನು ರಾಹುಲ್ ಗಾಂಧಿ ಹೊಗಳಿದ್ದರು. ಆದರೀಗ ತನ್ನನ್ನು ಹೊಗಳಿದ ರಾಹುಲ್ ಗಾಂಧಿಗೆ ತಿರುಗೇಟು ನಿಡಿರುವ ಗಡ್ಕರಿ ನಿಮ್ಮ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ ಎಂದು ತಿವಿದಿದ್ದಾರೆ.

ನವದೆಹಲಿ[ಫೆ.05]: ‘ಮನೆಯನ್ನೇ ಸರಿಯಾಗಿ ನೋಡಿಕೊಳ್ಳದವರು ದೇಶವನ್ನು ನಿರ್ವಹಿಸಲಾರರು’ ಎಂದು ಕಾರ್ಯಕ್ರಮವೊಂದರಲ್ಲಿ ಶನಿವಾರ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೀಗ ತನ್ನನ್ನು ಹೊಗ:ಇದ ರಾಹುಲ್ ಗಾಂಧಿಗೆ ಗಡ್ಕರಿ ತಿರುಗೇಟು ನೀಡಿದ್ದಾರೆ.

ಟ್ವೀಟ್ ಮಾಡಿದ್ದ ರಹುಲ್ ಗಾಂಧಿ 'ಬಿಜೆಪಿಯಲ್ಲಿ ಒಂದಷ್ಟು ಧೈರ್ಯ ಅಂತ ಹೊಂದಿರುವ ಏಕೈಕ ನಾಯಕ ಅವರು. ಅವರಿಗೆ ನನ್ನ ಪ್ರಶಂಸೆ. ಆದರೆ ಗಡ್ಕರಿ ಅವರು ರಫೇಲ್‌ ಮತ್ತು ಅನಿಲ್‌ ಅಂಬಾನಿ ಹಗರಣ, ರೈತರ ಸಮಸ್ಯೆ, ಸಂಸ್ಥೆಗಳ ನಾಶ ಕುರಿತಂತೆಯೂ ಮಾತನಾಡಬೇಕು ಎಂದು ರಾಹುಲ್‌ ಟ್ವೀಟ್‌ ಮಾಡಿದ್ದರು.

Scroll to load tweet…

ಗಣರಾಜ್ಯೋತ್ಸವ ದಿನಾಚರಣೆಯಂದು ರಾಹುಲ್‌ ಗಾಂಧಿ ಅವರು ಗಡ್ಕರಿ ಜತೆಗೆ ಆತ್ಮೀಯವಾಗಿ ಸಮಾಲೋಚನೆ ನಡೆಸಿದ ಬೆಳವಣಿಗೆ ನಡೆದ ಬೆನ್ನಲ್ಲೇ ಈ ಹೊಗಳಿಕೆಯ ಮಾತುಗಳು ಕೇಳಿ ಬಂದಿರುವುದು ಹಲವಾರು ಚರ್ಚೆಗಳನ್ನು ಹುಟ್ಟು ಹಾಕಿದ್ದವು. ಆ

Scroll to load tweet…

ಆದರೀಗ ರಾಹುಲ್ ಗಾಂಧಿಯ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಗಡ್ಕರಿ 'ರಾಹುಲ್‌ಜೀ, ನಾನು ಧೈರ್ಯವಂತ ಎಂದು ನೀವು ಪ್ರಮಾಣ ಪತ್ರ ನೀಡಬೇಕಾದ ಅಗತ್ಯವಿಲ್ಲ. ಆದರೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ನೀವು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಮಾಧ್ಯಮಗಳಿಂದ ತಿರುಚಲ್ಪಟ್ಟ ಸುದ್ದಿಗಳನ್ನು ಬಳಸುತ್ತಿದ್ದೀರೆಂಬ ವಿಚಾರದಿಂದ ನನಗೆ ಅಚ್ಚರಿಯಾಗುತ್ತಿದೆ' ಎಂದಿದ್ದಾರೆ.