ಇಸ್ಲಾಮಾಬಾದ್‌[ಅ.08]: ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಹತಾಶರಾಗಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಕಾಶ್ಮೀರಿಗಳಿಗೆ ಸಹಾಯ ಮಾಡಲು ಗಡಿ ದಾಟಿ ಹೋಗಬೇಡಿ ಎಂದು ಪಾಕ್‌ ಆಕ್ರಮಿತ ಕಾಶ್ಮೀರಿ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಗಡಿ ದಾಟಿದರೆ ಭಾರತೀಯರ ಕೈಗೆ ಸಿಕ್ಕಿ ಅಪಾಯಕ್ಕೆ ತುತ್ತಾಗಬಹುದು ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಜಮ್ಮು ಕಾಶ್ಮೀರದ ಜನರ ಬಗ್ಗೆ ಕಾಶ್ಮೀರಿಗಳ ಕಾಳಜಿ ನನಗೆ ಅರ್ಥವಾಗುತ್ತದೆ. ಮಾನವಿಯತೆ ದೃಷ್ಟಿಯಿಂದ ನೀವು ಅವರ ಸಹಾಯಕ್ಕೆ ಹೋದರೆ ಅಪಾಯ ಎದುರಾಗಬಹುದು ಎಂದು ಹೇಳಿದ್ದಾರೆ.

ಅ ಮೂಲಕ ಮತ್ತೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.