Asianet Suvarna News Asianet Suvarna News

ರಾಜ್ಯದಲ್ಲಿಯೇ ಭೂಗತನಾಗಿದ್ದ ಚೋಟಾ ಶಕೀಲ್ ಬಲಗೈ ಬಂಟ: ತನಿಖೆ ವೇಳೆ ಆತಂಕಕಾರಿ ಮಾಹಿತಿ ಬಯಲು

ಆತ ಭೂಗತ ದೊರೆ  ಇಬ್ರಾಹಿಂ ಮತ್ತು ಚೋಟಾ ಶಕೀಲ್ ಬಲಗೈ ಬಂಟ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ. ಜೈಲಿನಲ್ಲಿದ್ದು ಭೂಗತ ಜಗತ್ತನ್ನು ಆಳುತ್ತಿದ್ದ. ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಬೆಳಗಾವಿಯಲ್ಲಿ ಮೂರು ವರ್ಷಗಳಿಂದ ಭೂಗತನಾಗಿದ್ದ ಎಂಬ ಆತಂಕಕಾರಿ ವಿಷಯ ಬಯಲಾಗಿದೆ. ಆ ಭೂಗತ ಪಾತಕಿ ಯಾರು ಅಂತೀರಾ? ಇಲ್ಲಿದೆ ವಿವರ

Don Chota Shakils Friend Was In Belgaum

ಬೆಳಗಾವಿ(ಮೇ.15): ಆತ ಭೂಗತ ದೊರೆ  ಇಬ್ರಾಹಿಂ ಮತ್ತು ಚೋಟಾ ಶಕೀಲ್ ಬಲಗೈ ಬಂಟ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ. ಜೈಲಿನಲ್ಲಿದ್ದು ಭೂಗತ ಜಗತ್ತನ್ನು ಆಳುತ್ತಿದ್ದ. ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಬೆಳಗಾವಿಯಲ್ಲಿ ಮೂರು ವರ್ಷಗಳಿಂದ ಭೂಗತನಾಗಿದ್ದ ಎಂಬ ಆತಂಕಕಾರಿ ವಿಷಯ ಬಯಲಾಗಿದೆ. ಆ ಭೂಗತ ಪಾತಕಿ ಯಾರು ಅಂತೀರಾ? ಇಲ್ಲಿದೆ ವಿವರ

ಆ ಭೂಗತ ಪಾತಕಿ ಬೇರ್ಯಾರು ಅಲ್ಲ ರಶೀದ್ ಮಾಲಬಾರಿ ಅಂತ. ಜೈಲಿನಿಂದ ಹೊರಬಂದ ಬಳಿಕ ಕಳೆದ ಮೂರು ವರ್ಷದಿಂದ ಬೆಳಗಾವಿಯಲ್ಲೆ ಅಡಗಿಕೊಂಡು ಇಲ್ಲಿಂದಲೆ ಭೂಗತ ಜಗತ್ತನ್ನು ಆಳುತ್ತಿದ್ದ ಎಂಬ ಆತಂಕಕಾರಿ ಮಾಹಿತಿ ಬೆಳಗಾವಿ ಪೋಲಿಸರ ತನಿಖೆ ವೇಳೆ ಬಯಲಾಗಿದೆ.

ಪಾತಕಿ ರಶೀದ್ ಮಾಲಬಾರಿ ಯಾರು?

ಡಿ-ಗ್ಯಾಂಗ್ ನ ಚೋಟಾ ಶಕೀಲನ ಬಲಗೈ ಬಂಟ, ರಸೀದ ಮಲಬಾರಿ 2014ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಕೋರ್ಟ್'ಗೆ ಹಾಜರಾಗದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು. ಆದರೆ ಬೆಳಗಾವಿಯಲ್ಲಿಯೇ ಉಳಿದಿದ್ದ ಈತ  ಯಾರಿಗೂ ಗೊತ್ತಾಗದಂತೆ  ಮುಂಬೈ-ಬೆಳಗಾವಿ ನಡುವೆ ಓಡಾಡಿಕೊಂಡಿದ್ದ. ಬೆಳಗಾವಿಯಲ್ಲಿ ಮಾಮು ಹೆಸರಿನಲ್ಲಿ ಗುರ್ತಿಸಿಕೊಂಡಿದ್ದ ಭೂಗತ ಪಾತಕಿ,  ಮಾಜಿ ಜಿ.ಪಂ. ಅಧ್ಯಕ್ಷರು, ಮಹಾನಗರ ಪಾಲಿಕೆ ಸದಸ್ಯರ ಆಶ್ರಯ ಪಡೆದು, ರಾಜಕಾರಣಿಗಳ ಫಾರ್ಮ್ ಹೌಸ್  ಮತ್ತು  ಮನೆಗಳಲ್ಲಿ ಆಶ್ರಯ ಪಡೆದಿದ್ದ. ಬೆಳಗಾವಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಕುಳಗಳಿಗೆ ಬೆದರಿಕೆ ಹಾಕಿ  ಹಣ ಸುಲಿಗೆ ಮಾಡುತ್ತಿದ್ದ . ಬೆಳಗಾವಿಯಲ್ಲಿ 100ಕ್ಕೂ ಹೆಚ್ಚು ಯುವಕರ ಪಡೆಯನ್ನೇ ಕಟ್ಟಿಕೊಂಡಿದ್ದ ಈತನಿಗೆ ಮೂವರು ಸೀಮಿ ಸಕ್ರಿಯ ಕಾರ್ಯಕರ್ತರು ಸಹ ಸಾಥ್ ಕೊಟ್ಟಿದ್ದರು. ಮಲಬಾರಿಗೆ ಮೂವರು ಸೀಮಿ ಸಕ್ರೀಯ ಕಾರ್ಯಕರ್ತರು ಸಹ ಸಾಥ್ ಕೊಟ್ಟಿದ್ದರು ಎಂಬ ಆತಂಕಕಾರಿ ವಿಷಯ  ರೋಹನ್ ರೇಡೆಕರ್ ಹತ್ಯೆ ತನಿಖೆ ವೇಳೆ ಬಯಲಾಗಿದೆ.

ಇನ್ನೂ ಉದ್ಯಮಿಯನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ  ಕೆಲವರನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿರುವ ವಿಷಯ ತಿಳಿದು ಪಾತಕಿ ರಶೀದ್ ಬೆಳಗಾವಿಯಲ್ಲಿ ಕಾಲ್ಕಿತ್ತಿದ್ದಾನೆ. ಸದ್ಯ  ಪಾತಕಿ ರಶೀದ್ ಗೆ ಸಹಾಯ ಮಾಡಿದ ಕೆಲವರನ್ನ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ.

Follow Us:
Download App:
  • android
  • ios