ಕ್ಯೂಟ್ ಬೀಸ್ಟ್ ಪೆಟ್ ರೆಸಾರ್ಟ್ ಎಂಬ ಸಂಸ್ಥೆ ಶ್ವಾನಗಳ ಮನೋರಂಜನೆಗೆಂದೇ ಪ್ರತ್ಯೇಕ ಥಿಯೇಟರ್ ಸ್ಥಾಪನೆ ಮಾಡಿದೆ.

ಚೀನಾದಲ್ಲಿ ಇದೀಗ ನಾಯಿ ಪ್ರೇಮಿಗಳು ಸಿಕ್ಕಾಪಟ್ಟೆ ಹೆಚ್ಚಾಗಿದ್ದಾರಂತೆ. ಹಾಗಾಗಿ, ಶ್ವಾನಗಳ ಪೌಷ್ಠಿಕ ಆಹಾರ ಮಳಿಗೆಗಳು, ಆಧುನಿಕ ಸಲೂನ್‌ಗಳು ತಲೆ ಎತ್ತಿವೆ. ಇಷ್ಟೆಲ್ಲ ಇದ್ದ ಮೇಲೆ ನಾಯಿಗಳಿಗೂ ಮನರಂಜನೆ ಬೇಡವೇ? ಅದಕ್ಕೆಂದೇ ನಾಯಿಗಳಿಗಳಿಗಾಗಿಯೇ ಸಿನಿಮಾ ಹಾಲ್ ನಿರ್ಮಿಸಲಾಗಿದೆಯಂತೆ. ಕ್ಯೂಟ್ ಬೀಸ್ಟ್ ಪೆಟ್ ರೆಸಾರ್ಟ್ ಎಂಬ ಸಂಸ್ಥೆ ಶ್ವಾನಗಳ ಮನೋರಂಜನೆಗೆಂದೇ ಪ್ರತ್ಯೇಕ ಥಿಯೇಟರ್ ಸ್ಥಾಪನೆ ಮಾಡಿದೆ. ಮನೆಯಲ್ಲೇ ಇದ್ದು ಬೋರಾಗುವ ನಾಯಿಗಳಿಗೆ ಮಾಲೀಕರು ಇಲ್ಲಿ ಸಿನಿಮಾ ತೋರಿಸಬಹುದಾಗಿದೆ.