Asianet Suvarna News Asianet Suvarna News

ನಾಯಿ ತಿಥಿ ಮಾಡಿ ಮಾನವೀಯತೆ ಮೆರೆದ ಕಗ್ಗೆರೆ ಜನ

ಆತ ಒಡಹುಟ್ಟಿದವನಲ್ಲ, ಅವರ ಸಂಬಂಧಿಯೂ ಅಲ್ಲ. ಆದ್ರೆ ಅವನ ಸಾವು ಇಡೀ ಗ್ರಾಮದ ಜನರಿಗೆ ನೋವು ತರಿಸಿತ್ತು. ಎಲ್ಲರ  ಪ್ರೀತಿ ಪಾತ್ರನಾಗಿದ್ದ ಅವನಿಗೆ ತಮ್ಮ  ಜಮೀನಿನಲ್ಲೆ ಅಂತ್ಯ ಸಂಸ್ಕಾರ ಮಾಡಿಕೊಂಡಿದರು.  ಅಲ್ಲದೇ ಅವನ ಸಮಾಧಿಗೆ ಪೂಜೆ ಮಾಡಿ, ಹಾಲು ತುಪ್ಪ ಬಿಟ್ಟಿದ್ದಾರೆ. ಅವನು ಬೇರಾರು ಅಲ್ಲ, ಗ್ರಾಮಕ್ಕೆ ಕಾವಲಾಗಿದ್ದ ನಾಯಿ. ಎಲ್ಲರ ಪ್ರೀತಿಯ ಕೆಂಪಾ.  

Dog thithi in Hassan

ಹಾಸನ (ಜ.19): ಆತ ಒಡಹುಟ್ಟಿದವನಲ್ಲ, ಅವರ ಸಂಬಂಧಿಯೂ ಅಲ್ಲ. ಆದ್ರೆ ಅವನ ಸಾವು ಇಡೀ ಗ್ರಾಮದ ಜನರಿಗೆ ನೋವು ತರಿಸಿತ್ತು. ಎಲ್ಲರ  ಪ್ರೀತಿ ಪಾತ್ರನಾಗಿದ್ದ ಅವನಿಗೆ ತಮ್ಮ  ಜಮೀನಿನಲ್ಲೆ ಅಂತ್ಯ ಸಂಸ್ಕಾರ ಮಾಡಿಕೊಂಡಿದರು.  ಅಲ್ಲದೇ ಅವನ ಸಮಾಧಿಗೆ ಪೂಜೆ ಮಾಡಿ, ಹಾಲು ತುಪ್ಪ ಬಿಟ್ಟಿದ್ದಾರೆ. ಅವನು ಬೇರಾರು ಅಲ್ಲ, ಗ್ರಾಮಕ್ಕೆ ಕಾವಲಾಗಿದ್ದ ನಾಯಿ. ಎಲ್ಲರ ಪ್ರೀತಿಯ ಕೆಂಪಾ.  

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಗ್ರಾಮಸ್ಥರು ನಾಯಿ ಸಮಾಧಿಗೆ ಹಾಲು ತುಪ್ಪ ಅರ್ಪಿಸಿ,ತಿಥಿ ಮಾಡಿ ಮಾನವೀಯತೆ ಮೆರೆದಿದ್ದಾರೆ.  ಕಗ್ಗೆರೆ ಗ್ರಾಮದ ಚನ್ನೇಗೌಡ ಎಂಬುವರ ಮನೆಯಲ್ಲಿ ಬಹಳ ವರ್ಷಗಳಿಂದ ಇದ್ದ ಕೆಂಪಾ(ನಾಯಿ)ಇಡೀ ಗ್ರಾಮದ ಪ್ರೀತಿಗೆ ಪಾತ್ರವಾಗಿತ್ತು.  ಮೊನ್ನೆ ಸಂಕ್ರಾಂತಿ ಹಬ್ಬದ ದಿನದಂದು ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕೆಂಪಾ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.. ಇದರಿಂದ ನೊಂದ ಗ್ರಾಮಸ್ಥರು ನಿನ್ನೆ ಕೆಂಪನನ್ನ ಮಣ್ಣು ಮಾಡಿದ ಸ್ಥಳದಲ್ಲಿ ಹಾಲು ತುಪ್ಪ ಬಿಟ್ಟು ಮಾನವೀಯತೆ ಮೆರೆದರು. ಈ ವೇಳೆ ನೂರಕ್ಕೂ ಹೆಚ್ಚು ಮಂದಿ ಕೆಂಪನ ಸಮಾಧಿಗೆ ಪೂಜೆ ಸಲ್ಲಿಸಿ, ತಿಥಿಯೂಟವನ್ನ ಕೂಡ ಮಾಡಿದ್ದು ವಿಶೇಷವಾಗಿತ್ತು.

Follow Us:
Download App:
  • android
  • ios