ಕೋಲ್ಕತ್ತಾ[ಆ.17]: ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯೊಂದು ಬಹುತೇಕರನ್ನು ಬೆಚ್ಚಿ ಬೀಳಿಸಿದೆ. ಡಾರ್ಜಿಲಿಂಗ್ ನಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಇದನ್ನು ಕಂಡ ನಾಯಿ ಆಕೆಯ ರಕ್ಷಣೆಗೆ ಧಾವಿಸಿದೆ. ತನ್ನ ಪ್ರಾಣವನ್ನು ಲೆಕ್ಕಿಸದೆ ಚಿರತೆ ಮೇಲೆರಗಿದ ನಾಯಿ ಅನ್ನ ಹಾಕಿ ಸಾಕಿದಾಕೆಯನ್ನು ರಕ್ಷಿಸಿದೆ. 

ಆಗಸ್ಟ್ 14ರಂದು ಈ ಘಟನೆ ನಡೆದಿದ್ದು, ಅರುಣಾ ಲೋಮಾ ಎಂಬಾಕೆ ಕೆಳ ಅಂತಸ್ತಿನ್ನು ಒರಸುತ್ತಿದ್ದಳು. ಈ ವೇಳೆ ಚಿರತೆಯೊಂದು ಏಕಾಏಕಿ ಆಕೆ ಮೇಲೆ ದಾಳಿ ನಡೆಸಿದೆ. ಅನ್ನ ಹಾಕಿ ಸಾಕಿದ ಒಡತಿ ಅಪಾಯದಲ್ಲಿರುವುದನ್ನು ಕಂಡ ನಾಯಿ 'ಟೈಗರ್' ಕೂಡಲೇ ಚಿರತೆ ಮೇಲೆರಗಿ ದಾಳಿ ನಡೆಸಿ, ಚಿರತೆಯನ್ನು ಓಡಿಸಿದೆ.