ನಾಯಿ ಬೊಗಳಿದ್ದಕ್ಕಾಗಿ ಯುವಕರ ನಡುವೆ ಜಗಳ; ಓರ್ವನ ಸ್ಥಿತಿ ಗಂಭೀರ

First Published 21, Feb 2018, 1:06 PM IST
Dog Fight between two Group in Bagalkote
Highlights

ನಾಯಿ ಬೊಗಳಿದ್ದಕ್ಕಾಗಿ ಯುವಕರ ‌ಮದ್ಯೆ ನಡೆದ ಜಗಳದಿಂದ  ಯುವಕನೊಬ್ಬ ಕೋಮಾ ಸ್ಥಿತಿ ತಲುಪಿದ್ದಾನೆ.  

ಬಾಗಲಕೋಟೆ (ಫೆ.21): ನಾಯಿ ಬೊಗಳಿದ್ದಕ್ಕಾಗಿ ಯುವಕರ ‌ಮದ್ಯೆ ನಡೆದ ಜಗಳದಿಂದ  ಯುವಕನೊಬ್ಬ ಕೋಮಾ ಸ್ಥಿತಿ ತಲುಪಿದ್ದಾನೆ.  

ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಚಿರಂಜೀವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಿನ್ನೆ ರಾತ್ರಿ ವಿನಾಯಕ ಎಂಬಾತನಿಂದ ಚಿರಂಜೀವಿ ತೀವ್ರವಾಗಿ ಹಲ್ಲೆಗೊಳಗಾಗಿದ್ದಾನೆ.   

ವಿನಾಯಕ ಎಂಬಾತನಿಗೆ ಸೇರಿದ ನಾಯಿ ಬೊಗಳಿದ್ದಕ್ಕಾಗಿ ರಾತ್ರಿ 10.30 ರ ವೇಳೆ ಜಗಳ ನಡೆದಿತ್ತು. ಜಗಳದಲ್ಲಿ ವಿನಾಯಕ ಬಡಿಗೆಯಿಂದ ಚಿರಂಜೀವಿ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆ ಕುರಿತು ಕೆರೂರ ಠಾಣಾ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.  

loader