ಬ್ರಿಟನ್[ಮೇ.04): ನಗರ ನಿವಾಸಿಗಳಿಗೆ ಶ್ವಾನ, ಬೆಕ್ಕು ಸೇರಿದಂತೆ ಇನ್ನಿತರ ಮೂಕ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಅಕ್ಕರೆ. ಕೆಲವರು ಈ ಪ್ರಾಣಿಗಳನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ಊಟ ಮಾಡ್ತಾರೆ. ಇನ್ನು ಮನೆಯ ಎಲ್ಲಾ ಕಡೆ ಹೋಗುವ ಈ ಪ್ರಾಣಿಗಳು ಆಯಕಟ್ಟಿನಲ್ಲಿ ಇಡಲಾದ ವಸ್ತುಗಳನ್ನು ಕೆಡವಿ ಹಾಕುವುದು ಹೊಸದೇನಲ್ಲ ಬಿಡಿ. ಆದ್ರೆ, ಬ್ರಿಟನ್‌ನಲ್ಲಿ ಶ್ವಾನವೊಂದು ಮಾಡಿದ ಕಿತಾಪತಿ ಕೇಳಿದ್ರೆ, ಹೌಹಾರುವುದು ಗ್ಯಾರಂಟಿ.

ಹೌದು, ಮನೆಯಲ್ಲಿ ಎನ್ವಲಪ್‌ ಕವರ್‌ನಲ್ಲಿ ಇಡಲಾಗಿದ್ದ ಸುಮಾರು 15 ಸಾವಿರ ರು.(20 ಪೌಂಡ್‌ ನೋಟುಗಳು) ಅನ್ನೇ ತಿಂದು ಹಾಕಿದೆ. ಅಲ್ಲದೆ, ಮತ್ತೊಂದು ಆಶ್ಚರ್ಯಕರ ವಿಚಾರ ಅಂದ್ರೆ, ಹಣ ತಿಂದ ಕಾರಣಕ್ಕೆ ಶ್ವಾನದ ಚಿಕಿತ್ಸೆಗೆ 11000 ರು. ಖರ್ಚಾಗಿದೆಯಂತೆ!