ರಾಜ್ಯಪಾಲ ವಾಜುಬಾಯಿ ವಾಲಾ ಗುಜರಾತ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.
ಬೆಂಗಳೂರು (ಡಿ.12): ರಾಜ್ಯಪಾಲ ವಾಜುಬಾಯಿ ವಾಲಾ ಗುಜರಾತ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.
ಗುಜರಾತ್ ಚುನಾವಣೆ ಮೊದಲ ಹಂತದ ಮತದಾನ ಮುಕ್ತಾಯವಾಗಿರುವ ಬೆನ್ನಲೇ ಹೀಗೊಂದು ವದಂತಿ ಹಬ್ಬಿದೆ. ಇದೇ 18 ರಂದು ಫಲಿತಾಂಶ ಹೊರಬರಲಿದ್ದು, ಅಚ್ಚರಿ ಎಂಬಂತೆ ವಾಜುಬಾಯಿ ವಾಲಾರನ್ನು ಗುಜರಾತ್ ಮುಖ್ಯಮಂತ್ರಿಗೆ ಗದ್ದುಗೆಗೆ ಮೋದಿ ಅಮಿತ್ ಶಾ ಜೋಡಿ ಆಯ್ಕೆ ಮಾಡುತ್ತದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಇನ್ನು ಗುಜರಾತ್ಗೆ ವಾಪಸ್ ಬರಲು ಸಿದ್ಧರಾಗಿರಿ ಎಂಬ ಸಂದೇಶವೊಂದು ಪ್ರಧಾನಿ ಕಚೇರಿಯಿಂದಲೇ ರವಾನೆಯಾಗಿದೆ ಎಂಬ ಸುದ್ದಿಯೂ ಹೊರಬಂದಿದೆ. ಆದರೆ ರಾಜ್ಯ ಬಿಜೆಪಿ ಮುಖಂಡರು ಈ ಕುರಿತು ಯಾವುದೇ ಮಾಹಿತಿಯೂ ಇಲ್ಲ. ಇದೆಲ್ಲ ಗಾಳಿ ಸುದ್ದಿ ಎನ್ನುತ್ತಿದ್ದಾರೆ.
