ಬೆಂಗಳೂರು(ಜೂ.19): ಗಾಂಜಾ ಮತ್ತಿತರ ಮಾದಕ ದ್ರವ್ಯ ವಸ್ತುಗಳು ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಇಂದಿನ ಯುವಪೀಳಿಗೆಯಲ್ಲಿ ಬಹುತೇಕರು ಈ ದುಶ್ಚಟಗಳ ದಾಸರಾಗಿದ್ದಾರೆ.

ಇದೇ ವೇಳೆ ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳು ಮನುಷ್ಯನ ಮೇಲೆ ಬೀರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಕುರಿತು ಎಲ್ಲೆಡೆ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಅದರಂತೆ ನೂತನ ಸಂಶೋಧನೆ ಪ್ರಕಾರ ಗಾಂಜಾ(ಮರಿಜುವಾನಾ) ಸೇವಿಸುವ ಪುರುಷ ಮತ್ತು ಮಹಿಳೆಯರಲ್ಲಿ ಕಾಮೋತ್ತೇಜನ ಇತರರಿಗಿಂತ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ.

ನೂತನ ಸಂಶೋಧನೆ ಪ್ರಕಾರ ಗಾಂಜಾ ಸೇವಿಸುವವರಲ್ಲಿ ಇತರರಿಗಿಂತೆ ಶೇ.20 ರಷ್ಟು ಹೆಚ್ಚು ಕಾಮೋತ್ತೇಜನ ಇರುತ್ತದೆ. ಗಾಂಜಾ ಸೇವನೆಯ ಕೇವಲ ನಾಲ್ಕು ವಾರಗಳಲ್ಲೇ ಇವರಲ್ಲಿ ಕಾಮೋತ್ತೇಜನ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಸಂಶೋಧನೆ ಹೇಳಿದೆ. 

ಇದಕ್ಕೆ ಕಾರಣವನ್ನೂ ನೀಡಿರುವ ಸಂಶೋಧಕರು, ಗಾಂಜಾ ಸೇವನೆ ಬಳಿಕ ಮಿಲನದ ಆಸೆ ಹೆಚ್ಚಾಗುತ್ತದೆ. ಅಲ್ಲದೇ ಸಾಮಾನ್ಯ ವೇಳೆಯಲ್ಲಿ ಹೆಚ್ಚು ದೈಹಿಕ ಪರಿಶ್ರಮ ಹಾಕುವ ಅನಿವಾರ್ಯತೆ ಗಾಂಜಾ ಸೇವನೆ ಬಳಿಕ ಇರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಆದರೆ ನಿರಂತರ ಗಾಂಜಾ ಸೇವನೆ ಮಹಿಳೆಯರಲ್ಲಿ ಬಂಜೆತನ ಮತ್ತು ಹೆರಿಗೆ ಸಂದರ್ಭದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.