ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಅಧಿಕೃತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಜಾರಿಯಾದ ಕಾರ್ಯಕ್ರಮ ಹಲವು ವಿವಾದಗಳ ನಡುವೆಯೂ ಮುಂದುವರಿದುಕೊಂಡೆ ಇದೆ. ಹಾಗಾದರೆ ಸಿಎಂ ಹಿಂದಕ್ಕೆ ಸರಿಯಲು ಅಸಲಿ ಕಾರಣ ಏನು?
ಬೆಂಗಳೂರು[ನ.09] ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಸರ್ಕಾರದ ಟಿಪ್ಪು ಜಯಂತಿ ಆಚರಣೆಯಿಂದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್ ಅಂತರ ಕಾಪಾಡಿಕೊಳ್ಳಲು ನಿರ್ಧರಿಸಿದ್ದು, ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಅಧಿಕೃತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ.
ಇದರ ಹಿಂದೆ ಬೇರೆಯ ಯೋಚನೆ ಇದೆಯೇ? ಸೋಶಿಯಲ್ ಮೀಡಿಯಾ ಹೇಳುತ್ತಿರುವುದೆ ಬೇರೆ.. ಟಿಪ್ಪುವಿನ ಹಿಂದೆ ಹೋದವರು ಎಲ್ಲರೂ ಸೋತಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಹೋದರೂ ಅವರಿಗೂ ಸೋಲಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಸಂಜಯ್ ಖಾನ್: ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದ ಸಂಜಯ್ ಖಾನ್ ಅವರ ಸ್ಟುಡಿಯೋ ಕ್ಕೆ ಬೆಂಕಿ ಬಿತ್ತು. ಸಂಜಯ್ ಖಾನ್ ಸಹ ಕೈ ಸುಟ್ಟುಕೊಂಡಿದ್ದರು.ಪ್ರಕರಣದಲ್ಲಿ 42 ಜನ ಸಾವಿಗೀಡಾಗಿ 25 ಜನ ಗಂಭೀರ ಗಾಯಗೊಂಡಿದ್ದರು. ಇದು 1989ರ ಪ್ರಕರಣ
ವಿಜಯ್ರ ಮಲ್ಯ: ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ್ದು ಎಂಬ ಖಡ್ಗ ತಂದ ವಿಜಯ್ ಮಲ್ಯ ಮಾಧ್ಯಮಗಳಲ್ಲಿ ಸಖತ್ ಪ್ರಚಾರ ಪಡೆದುಕೊಂಡಿದ್ದರು. ಆದರೆ ಈಗ ಆರ್ಥಿಕ ಅಪರಾಧಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ.
ಯಡಿಯೂರಪ್ಪಗೂ ಛಾಟಿ: ಬಿಜೆಪಿಯನ್ನು ತೊರೆದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ ಟಿಪ್ಪು ಕೊಂಡಾಡಿದ್ದರು. ನಂತರ ಬಿಜೆಪಿಗೆ ಬಂದು ಅಧ್ಯಕ್ಷರಾಗಿ ವಿಧಾನಸಭೆ ಚುವಾವಣೆ ಎದುರಿಸಿ ಕೇವಲ ಒಂದು ದಿನದ ಮುಖ್ಯಮಂತ್ರಿಯಾದರು.
ಸಿದ್ದರಾಮಯ್ಯ: ಟಿಪ್ಪು ಜಯಂತಿಯನ್ನು ಅಧಿಕೃತ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಆದರೆ ಸಿದ್ದರಾಮಯ್ಯ 2018ರ ಚುನಾವಣೆ ಫಲಿತಾಂಶದ ನಂತರ ಹಿಂದಕ್ಕೆ ಸರಿಯಬೇಕಾಯಿತು. ಅವರ ಬೆಂಬಲಿಗರನ್ನು ಮೂಲೆಗುಂಪು ಮಾಡಲಾಯಿತು.
