ಜುಲೈ 1 ರಿಂದ ಜಿಎಸ್‌ಟಿ ಜಾರಿಗೆ ದೇಶ ಮುಂದಾಗುತ್ತಿದ್ದು, ಇದು ಯಾವ್ಯಾವುದರ ಮೇಲೆ ಯಾವ ರೀತಿಯ ಪರಿಣಾಮ ಬೀರಬಲ್ಲದು ಎಂಬ ಸ್ಪಷ್ಟ ಚಿತ್ರಣವಿನ್ನು ಸಿಕ್ಕಿಲ್ಲ. ಈಗಾಗಲೇ ಆನ್‌ಲೈನ್ ಮಾರಾಟದಿಂದ ನಷ್ಟ ಅನುಭವಿಸುತ್ತಿರುವ ಔಷದ ವ್ಯಾಪಾರಿಗಳಿಗೂ ಜಿಎಸ್‌ಟಿ ಬಗ್ಗೆ ಗೊಂದಲವಿದ್ದು ಔಷಧ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಳಿಗೆಗಳಲ್ಲಿ ಔಷಧಗಳ ದಾಸ್ತಾನು ಕಡಿಮೆಯಾಗಿದ್ದು ಇದರಿಂದ ಔಷಧ ಕೊರತೆ ಎದುರಾಗಲಿದೆ.
ಬೆಂಗಳೂರು (ಜೂ.27): ಜುಲೈ 1 ರಿಂದ ಜಿಎಸ್ಟಿ ಜಾರಿಗೆ ದೇಶ ಮುಂದಾಗುತ್ತಿದ್ದು, ಇದು ಯಾವ್ಯಾವುದರ ಮೇಲೆ ಯಾವ ರೀತಿಯ ಪರಿಣಾಮ ಬೀರಬಲ್ಲದು ಎಂಬ ಸ್ಪಷ್ಟ ಚಿತ್ರಣವಿನ್ನು ಸಿಕ್ಕಿಲ್ಲ. ಈಗಾಗಲೇ ಆನ್ಲೈನ್ ಮಾರಾಟದಿಂದ ನಷ್ಟ ಅನುಭವಿಸುತ್ತಿರುವ ಔಷದ ವ್ಯಾಪಾರಿಗಳಿಗೂ ಜಿಎಸ್ಟಿ ಬಗ್ಗೆ ಗೊಂದಲವಿದ್ದು ಔಷಧ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಳಿಗೆಗಳಲ್ಲಿ ಔಷಧಗಳ ದಾಸ್ತಾನು ಕಡಿಮೆಯಾಗಿದ್ದು ಇದರಿಂದ ಔಷಧ ಕೊರತೆ ಎದುರಾಗಲಿದೆ.
ಈ ವರೆಗೆ ಔಷಧದ ಮೇಲಿನ ತೆರಿಗೆ ಪ್ರಮಾಣ ಶೇ.9 ರಷ್ಟಿದ್ದು ಜಿಎಸ್ಟಿ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಈ ಪ್ರಮಾಣ ಶೇ.12 ಕ್ಕೆ ಏರಲಿದೆ. ಅಲ್ಲದೆ ಗರಿಷ್ಟ ಮಾರಾಟ ದರವು ಶೇ.2.5 ಹೆಚ್ಚಾಗಲಿದೆ. ವ್ಯಾಪಾರಿಗಳು ದಾಸ್ತಾನು ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಳೆಯ ಔಷಧ ಇಟ್ಟುಕೊಂಡರೆ ಹಳೆ ಬೆಲೆಗೆ ಔಷಧ ಮಾರಬೇಕಾ ಅಥವಾ ಜಿಎಸ್ಟಿ ಬೆಲೆಗೆ ಮಾರಬೇಕಾ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಮಾರಾಟಗಾರರಿಗೆ ನಷ್ಟವಾಗುವುದೇ ಹೊರತು ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ.
ದೇಶಾದ್ಯಂತ ಕಳೆದ 75 ದಿನಗಳಿಂದ ವ್ಯಾಪಾರಿಗಳು ಔಷಧ ಖರೀದಿ ಪ್ರಮಾಣವನ್ನು ತಗ್ಗಿಸಿದ್ದು ಇದು ಕೆಲವು ಕಡೆ ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ಈಗಾಗಲೆ ಔಷಧ ಮಳಿಗೆಗಳಲ್ಲಿ ಶೇ.50 ರಷ್ಟು ಔಷಧ ಕೊರತೆ ಕಾಣುತ್ತಿದೆ. ಜಿಎಸ್ಟಿಗೆ ರೂಪಾಂತರಗೊಳ್ಳುವ ಸಮಯವಿದಾಗಲಿದ್ದು ಜುಲೈನಲ್ಲಿ ಔಷಧ ಮಾರಾಟದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ. ಹಳೆಯ ದಾಸ್ತಾನುಗಳುನ್ನು ಗ್ರಾಹಕರಿಗೆ ಅನುಕೂಲವಾಗುವಂತೆ ಮಾರಲಾಗುವುದು. ಗ್ರಾಹಕರು ಈ ಬಗ್ಗೆ ಚಿಂತಿವಂತಿಲ್ಲ ಎಂದು ಡ್ರಗ್ಸ್ ಅಸೋಶಿಏಷನ್ ಆದ್ಯಕ್ಷ ರಘುನಾಥ್ ಹೇಳಿದ್ದಾರೆ.
ಈಗಾಗಲೆ ದಾಸ್ತಾನು ಇರುವ ಔಷಧಿಗಳಿಂದ ಉತ್ಪಾದಕರು ಶೇ.2.5 ರಷ್ಟು ನಷ್ಟ ಅನುಭವಿಸಬೇಕಾಗಿದ್ದು ಮಾರಾಟಗಾರರು ಶೇ.1 ರಿಂದ ಶೇ.1.2 ರಷ್ಟು ನಷ್ಟ ಅನುಭವಿಸಲಿದ್ದಾರೆ. ಕೆಲವೇ ಕಲವು ಉತ್ಪಾದಕರು ಮಾರಾಟಗಾರರಿಗೆ ನಷ್ಟ ಭರಿಸುವ ಭರವಸೆಯನ್ನು ನೀಡುತ್ತಿದ್ದು ಈ ಬಗ್ಗೆ ಯಾವುದೆ ಲಿಖಿತ ಸ್ಪಷ್ಟನೆ ಇಲ್ಲ. ಶೀಘ್ರವೇ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡರೆ ಔಷಧ ಮಾರಾಟಗಾರರಿಗೂ ದಾಸ್ತನು ಮಾರುವುದರಲ್ಲಿ ಅನುಕೂಲವಾಗುತ್ತದೆ.
