ಚುನಾವಣಾ ಕಣಕ್ಕಿಳಿಯುವ ಸಿಎಂ ಪುತ್ರ ಯತೀಂದ್ರಗೆ ಪಕ್ಷಾತೀತವಾಗಿ ವೈದ್ಯರ ಬೆಂಬಲ

First Published 31, Mar 2018, 3:31 PM IST
Doctors Support Yathindra
Highlights

ಸಿಎಂ ಪುತ್ರ ಯತೀಂದ್ರ ಅವರು ಇದೀಗ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧವಾಗಿದ್ದು, ಅವರಿಗೆ ಡಾಕ್ಟರ್ ಗಳ ಬೆಂಬಲವಂತೆ ಸಿಗುತ್ತಿದೆ ಎಂದು ಹೇಳಲಾಗಿದೆ. 

ಮೈಸೂರು : ಸಿಎಂ ಪುತ್ರ ಯತೀಂದ್ರ ಅವರು ಇದೀಗ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧವಾಗಿದ್ದು, ಅವರಿಗೆ ಡಾಕ್ಟರ್ ಗಳ ಬೆಂಬಲ ಸಿಗುತ್ತಿದೆ.

ಡಾ ಯತೀಂದ್ರ ಕಣಕ್ಕಿಳಿದರೆ ನಮ್ಮ ಬೆಂಬಲ ಕೊಟ್ಟೇ ಕೊಡುತ್ತೇವೆ ಎಂದು  ಯತೀಂದ್ರಂಗೆ ಬಹಿರಂಗ ಬೆಂಬಲವನ್ನು ಭಾರತೀಯ ವೈದ್ಯಕೀಯ ಸಂಘ-ಭಾರತೀಯ ವೈದ್ಯಕೀಯ ಸಂಘ ಘೋಷಿಸಿದೆ.

ವಿಧಾನಸಭಾ ಎಲೆಕ್ಷನ್ ನಲ್ಲಿ ಕಣಕ್ಕಿಳಿಯುವ ಎಲ್ಲಾ ವೈದ್ಯರಿಗೂ ಪಕ್ಷತೀತಾವಾಗಿ ಬೆಂಬಲ ನೀಡಲು ನಿರ್ಧಾರ ಮಾಡಲಾಗಿದೆ. ಈ ನಿಯಮದಂತೆ ಸಿಎಂ ಮಗನಿಗೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಯತೀಂದ್ರ ಪರ ಪ್ರಚಾರಕ್ಕೆ ಹೋಗಲು ಕೂಡ ವೈದ್ಯರು ಸಿದ್ಧರಾಗಿದ್ದಾಗಿ ಭಾರತೀಯ ವೈದ್ಯ ಸಂಘದ ಅಧ್ಯಕ್ಷ ರವೀಂದ್ರ ಹೇಳಿಕೆ ನೀಡಿದ್ದಾರೆ.

loader