ಹೊಟ್ಟೆ ನೋವಿಂದ ಬಳಲುತ್ತಿದ್ದ ಕೃಷ್ಣ ಸೋಮಲ್ಯ ಸಂಬರ್ ಎಂಬುವವರನ್ನು ವೈದ್ಯಕೀಯ ತಪಾಸಣೆಗೆ ಕರೆತಂದಾಗ, ಹೊಟ್ಟೆಯಲ್ಲಿ ಲೋಹದ ವಸ್ತುಗಳಿರುವುದು ಕಂಡು ವೈದ್ಯರಿಗೆ ಅಚ್ಚರಿಯಾಯಿತು.  ಕೊನೆಗೆ ಶಸ್ತ್ರಕ್ರಿಯೆ ನಡೆಸಿದಾಗ 72 ನಾಣ್ಯಗಳು ಪತ್ತೆಯಾದವು.

ಮುಂಬೈ(ಡಿ.3): ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 5 ಕೆ.ಜಿ ಕಬ್ಬಿಣ ಪತ್ತೆಯಾಗಿತ್ತು. ಇದೀಗ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 50 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ 72 ನಾಣ್ಯ ಪತ್ತೆಯಾಗಿದೆ.

ಹೌದು. ಹೊಟ್ಟೆ ನೋವಿಂದ ಬಳಲುತ್ತಿದ್ದ ಕೃಷ್ಣ ಸೋಮಲ್ಯ ಸಂಬರ್ ಎಂಬುವವರನ್ನು ವೈದ್ಯಕೀಯ ತಪಾಸಣೆಗೆ ಕರೆತಂದಾಗ, ಹೊಟ್ಟೆಯಲ್ಲಿ ಲೋಹದ ವಸ್ತುಗಳಿರುವುದು ಕಂಡು ವೈದ್ಯರಿಗೆ ಅಚ್ಚರಿಯಾಯಿತು.

ಕೊನೆಗೆ ಶಸ್ತ್ರಕ್ರಿಯೆ ನಡೆಸಿದಾಗ 72 ನಾಣ್ಯಗಳು ಪತ್ತೆಯಾದವು. ಮಾನಸಿಕ ಅಸ್ವಸ್ಥನಾಗಿದ್ದ ಸಂಬರ್ ಅಪರೂಪದ ಮೆಟಲ್ಲೋ-ಫೆಜಿಯಾ ಕಾಯಿಲೆಯಿಂದ ಬಳಲುತ್ತಿದ್ದ. ಲೋಹದ ವಸ್ತುಗಳನ್ನು ತಿನ್ನಬೇಕೆನಿಸುವುದು ಈ ಕಾಯಿಲೆಯ ಲಕ್ಷಣ. ಹೀಗಾಗಿ ಆತ ಸಾಕಷ್ಟು ಲೋಹದ ವಸ್ತುಗಳನ್ನು ತಿಂದಿದ್ದಾನೆ. ಅವುಗಳಲ್ಲಿ ಕೆಲವು ಸಹಜ ಮಲ ವಿಸರ್ಜನೆಯ ಮೂಲಕ ಹೊರಹೋಗಿದೆ. ಆದರೆ ಇನ್ನುಳಿದವು ಹೊಟ್ಟೆಯಲ್ಲೇ ಬಾಕಿಯಾಗಿತ್ತು.