ಚೆನ್ನೈ[ಆ.01]: ಬಾಯಲ್ಲಿ 32 ಹಲ್ಲುಗಳಿರುತ್ತವೆ. ಕೆಲವರಲ್ಲಿ ಕೋರೆ ಹಲ್ಲುಗಳು ಹುಟ್ಟುಕೊಳ್ಳುತ್ತವೆ. ಆದರೆ, ಚೆನ್ನೈನಲ್ಲಿ ರವೀಂದ್ರನಾಥ್‌ ಎಂಬ ಏಳು ವರ್ಷದ ಬಾಲಕನೊಬ್ಬನ ದವಡೆಯಲ್ಲಿ ವೈದ್ಯರು 527 ಹಲ್ಲುಗಳು ಪತ್ತೆಯಾಗಿವೆ. ಈ ಹಲ್ಲುಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.

ಬಲ ಭಾಗದ ಕೆನ್ನೆ ಊದಿಕೊಂಡಿದ್ದರಿಂದ ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಲ್ಲುಗಳು ಹೊರಗಿನಿಂದ ಕಾಣಿಸುತ್ತಿರಲಿಲ್ಲ. ಎಕ್ಸ್‌ರೇ, ಸಿಟಿ ಸ್ಕ್ಯಾನ್‌ಗಳನ್ನು ಮಾಡಿದ ವೇಳೆ ದವಡೆಯ ಮೂಳೆಯ ಕೆಳಭಾಗದಲ್ಲಿ ಚಿಕ್ಕ ಚಿಕ್ಕ ಹಲ್ಲುಗಳು ಬೆಳೆದಿರುವುದು ತಿಳಿಬಂದಿದೆ. ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಈ ಹಲ್ಲುಗಳನ್ನು ಕಿತ್ತು, ನೈಸರ್ಗಿಕವಾಗಿ ಬೆಳೆದ 21 ಹಲ್ಲುಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಬಾಲಕನಲ್ಲಿ ಈ ರೀತಿಯ ಅನೈಸರ್ಗಿಕ ಬೆಳವಣಿಗೆಗೆ ಕಾರಣ ಏನು ಎಂಬುದು ವೈದ್ಯರಿಗೂ ತಿಳಿದುಬಂದಿಲ್ಲ. ಮೊಬೈಲ್‌ ಟವರ್‌ಗಳ ವಿಕಿರಣಗಳು ಮತ್ತು ಆನುವಂಶಿಕ ಕಾರಣಗಳಿಂದ ಹೆಚ್ಚುವರಿ ಹಲ್ಲುಗಳು ಬೆಳೆದಿರಬಹುದು ಎಂದು ವೈದ್ಯರು ಹೇಳಿದ್ದಾರೆ.