ಜೈಪುರ[ಮೇ.15]: ಹೊಟ್ಟೆನೋವೆಂದು ಚಿಕಿತ್ಸೆಗೆ ಬಂದಿದ್ದ 42 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿ ಭರ್ಜರಿ ಪ್ರಮಾಣದ ಕಬ್ಬಿಣದ ಮೊಳೆ ಪತ್ತೆಯಾದ ಘಟನೆ ರಾಜಸ್ಥಾನದ ಬುಂಡಿಯಲ್ಲಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಭೋಲಾ ಶಂಕರ್‌ ಎಂಬಾತನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಈ ವೇಳೆ ಹೊಟ್ಟೆಯಲ್ಲಿ 116 ಕಬ್ಬಿಣದ ಮೊಳೆ ಪತ್ತೆಯಾಗಿದೆ. ಈ ಪೈಕಿ ಬಹುತೇಕ ಮೊಳೆಗಳು 6.5 ಸೆಂ.ಮೀನಷ್ಟು ಉದ್ದವಿದ್ದು, ಇಷ್ಟುದೊಡ್ಡ ಮೊಳೆ ಹೊಟ್ಟೆಸೇರಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರನ್ನೂ ಕಾಡಿದೆ.

ಒಂದು ವೇಳೆ ಮೊಳೆ ಕರುಳು ಸೇರಿದ್ದರೆ ಜೀವಕ್ಕೇ ಅಪಾಯವಿತ್ತು ಎಂದು ವೈದ್ಯರು ಹೇಳಿದ್ದಾರೆ.