ಆರೋಗ್ಯ ಸಚಿವ ರಮೇಶ್ ಕುಮಾರ್ ಕೆಪಿಎಂಇ ವಿಧೇಯಕ ಮಂಡನೆ ವಿಚಾರದಲ್ಲಿ ಅತ್ತ ಬ್ಯುಸಿಯಾಗಿದ್ದರೆ ಇತ್ತ ಅವರ ತವರು ಜಿಲ್ಲೆಯಲ್ಲಿ  ವೈದ್ಯರ ಪರ ಪ್ರತಿಭಟನೆ ನಡೆದಿದೆ.

ಕೋಲಾರ (ನ.17): ಆರೋಗ್ಯ ಸಚಿವ ರಮೇಶ್ ಕುಮಾರ್ ಕೆಪಿಎಂಇ ವಿಧೇಯಕ ಮಂಡನೆ ವಿಚಾರದಲ್ಲಿ ಅತ್ತ ಬ್ಯುಸಿಯಾಗಿದ್ದರೆ ಇತ್ತ ಅವರ ತವರು ಜಿಲ್ಲೆಯಲ್ಲಿ ವೈದ್ಯರ ಪರ ಪ್ರತಿಭಟನೆ ನಡೆದಿದೆ. ಹಣ ಕೊಟ್ಟು ಮಹಿಳೆಯರನ್ನು ಪ್ರತಿಭಟನೆ ಕರೆತರಲಾಗಿದೆ. ಪ್ರತಿಭಟನೆಗೆ ಬಂದವರಿಗೆ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳು ಹಣ ಹಂಚಿಕೆ ಮಾಡಿದ್ದು ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ಹಣ ಹಂಚಿಕೆ ಈ ದೃಶ್ಯ ಸೆರೆಯಾಗಿದೆ.

ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆದ ವೈದ್ಯರ ಪರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯರಿಗೆ ಹಣ ಹಂಚಿಕೆ ಮಾಡಲಾಗಿದೆ. ಲೀಸ್ಟ್​ನಲ್ಲಿದ್ದ ಮಹಿಳೆಯರ ಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ಮುಖಂಡರು ಹಂ ನೀಡಿದ್ದಾರೆ.