ಹೈದರಾಬಾದ್[ಫೆ.10]: ಶಸ್ತ್ರಚಿಕಿತ್ಸೆ ವೇಳೆ ಅತ್ಯಂತ ಜಾಗರೂಕರಾಗಿರಬೇಕಿರುವ ವೈದ್ಯರು, ಮಹಿಳಾ ರೋಗಿಯೊಬ್ಬರ ಹೊಟ್ಟೆಯಲ್ಲೇ ಎರಡು ಕತ್ತರಿಯನ್ನು ಬಿಟ್ಟು ಹೊಲಿಗೆ ಹಾಕಿದ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ.

ಕಳೆದ ನವೆಂಬರ್‌ನಲ್ಲಿ ಮಹಿಳೆಯೊಬ್ಬರು ಹೈದ್ರಾ ಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದರು. ಈ ವೇಳೆ ವೈದ್ಯರ ಎಡವಟ್ಟಿನಿಂದ ಎರಡು ಕತ್ತರಿ ಹೊಟ್ಟೆಯಲ್ಲೇ ಉಳಿದು ಬಿಟ್ಟಿತ್ತು. ಆಗ ಅದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಮಹಿಳೆ ಹೊಟ್ಟೆನೋವು ಎನ್ನುವ ಕಾರಣಕ್ಕಾಗಿ ಎಕ್ಸರೇ ತೆಗೆಸಿದಾಗ, ಹೊಟ್ಟೆಯಲ್ಲಿ ಕತ್ತರಿ ಕಂಡಿದೆ.