ವೈದ್ಯರ ನಿರ್ಲಕ್ಷ್ಯದಿಂದಲೇ ನಮ್ಮ ಮಗು ಈ ಸ್ಥಿತಿ ತಲುಪಿದೆಯೆಂದು ಮಗುವಿನ ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ.

ಬೆಂಗಳೂರು (ಸೆ.14):ವೈದ್ಯರ ನಿರ್ಲಕ್ಷ್ಯಕ್ಕೆ ಆರು ತಿಂಗಳ ಮಗುವೊಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಬೆಂಗಳೂರಿನ ಹೊರವಲಯದ ಹೊಸೂರು ರಸ್ತೆಯ ಬೊಮ್ಮಸಂದ್ರದಲ್ಲಿರುವ ಕಿರಣ್ ಮಜೂಂದಾರ್ ಷಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಅವಾಂತರಕ್ಕೆ ಮಗು ಅತಂತ್ರ ಸ್ಥಿತಿಯಲ್ಲಿದೆ.

ರಾಯಚೂರಿನ ಅಜ್ಮತ್​ಖಾನ್ ಮತ್ತು ಅಯೇಷಖಾನ್​ ದಂಪತಿಯ ಆರು ತಿಂಗಳ ಕೂಸು ಹಾಲು ಕುಡಿದಾಗ ವಾಂತಿಯಾಗುತ್ತಿತ್ತು. ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ ವೈದ್ಯ ಡಾ.ಅನಿಲ್ ಸಪಾರಿ ಮರುದಿನವೇ ಏಳು ದಿನಗಳ ಮೇಲೆ ರಜೆ ಹೋದರು. ಸಹಾಯಕರು ವೈದ್ಯರು ಸರಿಯಾದ ಚಿಕಿತ್ಸೆ ನೀಡಲಿಲ್ಲ. ಅನಿಲ್ ಸಪಾರಿ ವಾಪಾಸ್ ಆದ ಬಳಿಕ ಮಗುವನ್ನು ಬದುಕಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಿದ್ದಾರೆ. ಮಗುವಿನ ಶ್ವಾಸಕೋಶದಲ್ಲಿ ಹಾಲು ಸೇರುತ್ತಿದ್ದು ತಾವು ತಮ್ಮ ಕೈ ಮೀರಿ ಮಗುವನ್ನು ಬದುಕಿಸಲು ಚಿಕಿತ್ಸೆ ನೀಡುತ್ತಿದ್ದು ಈ ವೈದ್ಯರ ನಿರ್ಲಕ್ಷ್ಯದಿಂದಲೇ ನಮ್ಮ ಮಗು ಈ ಸ್ಥಿತಿ ತಲುಪಿದೆಯೆಂದು ಮಗುವಿನ ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ.