ಹಾವೇರಿಯ  ಬ್ಯಾಡಗಿ ತಾಲೂಕಿನ ಬುಡಪನಳ್ಳಿ ಗ್ರಾಮದ ಬಸವಣ್ಣೆವ್ವ ಎಂಬ ಗರ್ಭಿಣಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು.  ಈ ವೇಳೆ  ಸರ್ಕಾರಿ ಆಸ್ಪತ್ರೆಯ ವೈದ್ಯೆ ಪುಷ್ಪಾ ಬಣಕಾರ್ ಸೂಕ್ತ ಚಿಕಿತ್ಸೆಯನ್ನ ನೀಡದೇ ನಿರ್ಲಕ್ಷ್ಯ  ತೋರಿದ್ದಾರೆ.  

ಹಾವೇರಿ(ಡಿ.8): ಹಾವೇರಿಯ ಬ್ಯಾಡಗಿ ತಾಲೂಕಿನ ಬುಡಪನಳ್ಳಿ ಗ್ರಾಮದ ಬಸವಣ್ಣೆವ್ವ ಎಂಬ ಗರ್ಭಿಣಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಈ ವೇಳೆ ಸರ್ಕಾರಿ ಆಸ್ಪತ್ರೆಯ ವೈದ್ಯೆ ಪುಷ್ಪಾ ಬಣಕಾರ್ ಸೂಕ್ತ ಚಿಕಿತ್ಸೆಯನ್ನ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ. ಆಗ ತಾನೆ ಹುಟ್ಟಿದ ನವಜಾತ ಶಿಶು ಸತ್ತು ಹೋಗಿದೆ ಎಂದು ಹೇಳಿ ಮಗುವಿನ ಹೊಕ್ಕಳಿನಲ್ಲಿ ಕತ್ತರಿ ಇಟ್ಟು ಕತ್ತರಿ ಸಮೇತ ಮನೆಗೆ ಕಳುಹಿಸಿ ಅಮಾನುಷವಾಗಿ ವರ್ತಿಸಿದ್ದಾರೆ ಎನ್ನುವ ಆಪಾದನೆ ಕೇಳಿಬಂದಿದೆ.

ಮನೆಗೆ ಬಂದ ತಂದೆ ತಾಯಿಗಳಿಗೆ ಆಶ್ಚರ್ಯವಾಗಿ ರಾಣೆಬೆನ್ನೂರಿನ ಖಾಸಗೀ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಹೋಗಿದ್ದಾರೆ. ವಿಚಿತ್ರ ಅಂದ್ರೆ ಮಗು ಆ ಸಮಯದಲ್ಲಿ ಸತ್ತಿರಲೇ ಇಲ್ಲ. ಖಾಸಗೀ ವೈದ್ಯರು ತಪಾಸಣೆ ಮಾಡುವ ಕೆಲವೇ ನಿಮಿಷಗಳ ಮೊದಲು ಮಗು ಮೃತಪಟ್ಟಿದೆ ಅನ್ನೋದು ತಿಳಿಬಂದಿದೆ. ಆದರೆ ಸರ್ಕಾರಿ ವೈದ್ಯೆ ಪುಷ್ಪಾ ಮಾತ್ರ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಈ ಪ್ರಕರಣವನ್ನು ವೈದ್ಯರ ಅಣತಿಯ ಮೇರೆಗೆ ದಂಪತಿ ಸಹ ಮುಚ್ಚಿಹಾಕಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಗ್ರಾಮದ ಪ್ರಜ್ಞಾವಂತರು ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.