ಮಕ್ಕಳಾಗಿಲ್ಲ ಎಂದು ಹೆಂಡತಿಗೆ ಕಿರುಕುಳ ನೀಡುತ್ತಿದ್ದ ವೈದ್ಯ ಅರೆಸ್ಟ್

news | Tuesday, April 3rd, 2018
Suvarna Web Desk
Highlights

ಮಕ್ಕಳಾಗಿಲ್ಲ ಎಂದು ಹೆಂಡತಿಗೆ ಕಿರುಕುಳ  ಕೊಡುತ್ತಿದ್ದ ವೈದ್ಯನೋರ್ವನ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.  ಪತಿ ಮಂಜುನಾಥ್ ವಿರುದ್ಧ ಪತ್ನಿ ಶಬರಿ ದೂರು ನೀಡಿದ್ದಾರೆ.

ಬೆಂಗಳೂರು : ಮಕ್ಕಳಾಗಿಲ್ಲ ಎಂದು ಹೆಂಡತಿಗೆ ಕಿರುಕುಳ  ಕೊಡುತ್ತಿದ್ದ ವೈದ್ಯನೋರ್ವನ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.  ಪತಿ ಮಂಜುನಾಥ್ ವಿರುದ್ಧ ಪತ್ನಿ ಶಬರಿ ದೂರು ನೀಡಿದ್ದಾರೆ.

ಮೂರು ವರ್ಷದ ಹಿಂದೆ ಮದುವೆ ಆಗಿದ್ದು. ಮಕ್ಕಳಾಗಿಲ್ಲ ಎಂದು ಹಿಂಸೆ ನೀಡುತ್ತಿದ್ದ, ನೀಲಿ ಚಿತ್ರವನ್ನು ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದ.

ತವರು ಮನೆಯಿಂದ ಹಣವನ್ನು ತರಲೂ ಕೂಡ ಒತ್ತಾಯ ಮಾಡುತ್ತಿದ್ದ. ಹಣ ತಂದಿಲ್ಲ ಎಂದರೆ ಲೈಂಗಿಕ ಕ್ರಿಯೆ ನಡೆಸಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದ. ಮೆಜಸ್ಟಿಕ್ ಬಳಿ ಮನೆ ಇದ್ದು ಅದನ್ನು ಮಾರಾಟ ಮಾಡುವಂತೆ ಒತ್ತಾಯ ಮಾಡುತ್ತಿದ್ದ  ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಂಡನ ಕಿರಕುಳಕ್ಕೆ ಬೇಸತ್ತು ಪತ್ನಿ ಶಬರಿ ದೂರು ನೀಡಿದ್ದು, ಇದೀಗ ಪತಿ ಮಂಜುನಾಥ್’ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರಿಗೆ ದೂರು ನೀಡದರೂ ಕೂಡ ಆಸಿಡ್ ಹಾಕುವುದಾಗಿ ಬೆದರಿಕೆ ಒಡ್ಡುತ್ತಿದ್ದ ಎಂದೂ ಕೂಡ ದೂರಿನಲ್ಲಿ ಪತ್ನಿ ಶಬರಿ ತಿಳಿಸಿದ್ದಾರೆ.

Comments 0
Add Comment