ಬಯಲಾಯ್ತು ಶಾಸಕ ಹ್ಯಾರಿಸ್ ಮತ್ತೊಂದು ಭಾರಿ ಕುತಂತ್ರ..!

First Published 17, Mar 2018, 10:37 AM IST
Do you no Why Nalapad assassinates Denied Bail
Highlights

ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ಮೆರೆದು ಮಗ ಜೈಲು ಸೇರಿದರೂ ಅಪ್ಪನಿಗೆ ಇನ್ನೂ ಬುದ್ದಿ ಬಂದಂತೆ ಕಾಣುತ್ತಿಲ್ಲ. ಮಗನಿಗೆ ಜಾಮೀನು ಸಿಗಲಿಲ್ಲ ಅನ್ನೋ ಕಾರಣ ಆತನ ಜೊತೆ ಇದ್ದವರೂ ಹೊರಗೆ ಬರಲಿಕ್ಕೆ ಹ್ಯಾರಿಸ್​ ಅಡ್ಡಿ ಆಗಿದ್ದಾರಾ ಅನ್ನೋ ಆರೋಪ ಕೇಳಿ ಬಂದಿದೆ.

ಬೆಂಗಳೂರು : ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ಮೆರೆದು ಮಗ ಜೈಲು ಸೇರಿದರೂ ಅಪ್ಪನಿಗೆ ಇನ್ನೂ ಬುದ್ದಿ ಬಂದಂತೆ ಕಾಣುತ್ತಿಲ್ಲ. ಮಗನಿಗೆ ಜಾಮೀನು ಸಿಗಲಿಲ್ಲ ಅನ್ನೋ ಕಾರಣ ಆತನ ಜೊತೆ ಇದ್ದವರೂ ಹೊರಗೆ ಬರಲಿಕ್ಕೆ ಹ್ಯಾರಿಸ್​ ಅಡ್ಡಿ ಆಗಿದ್ದಾರಾ ಅನ್ನೋ ಆರೋಪ ಕೇಳಿ ಬಂದಿದೆ.

ಈ ಸುದ್ದಿ ಬೆನ್ನತ್ತಿದ ಸುವರ್ಣ ನ್ಯೂಸ್​​ ಪೂರಕ ಸಾಕ್ಷ್ಯಗಳು ಸಿಕ್ಕಿವೆ. ಅಸಲಿ ವಿಷಯ ಏನಂದರೆ ನಲಪಾಡ್ ನ ಇತರ 6 ಮಂದಿ ಆರೋಪಿಗಳು ಹೈಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿಯೇ ಇಲ್ಲ. ಯಾಕಂದ್ರೆ, ಆರೋಪಿಗಳ ಅರ್ಜಿ ಸಲ್ಲಿಸೋಕೆ ಹ್ಯಾರಿಸ್​​​​​​​ ಅಡ್ಡಿಯಾಗಿದ್ದಾರೆ ಅನ್ನೋ ಮಾಹಿತಿ ಸುವರ್ಣ ನ್ಯೂಸ್​ಗೆ ಸಿಕ್ಕಿದೆ.

ಸೆಷನ್ಸ್​​ ಕೋರ್ಟ್​​ನಲ್ಲಿಯೂ ಇದೇ ಹ್ಯಾರಿಸ್​ ಎಲ್ಲಾ ಆರೋಪಿಗಳಿಗೂ ಅರ್ಜಿ ಹಾಕಿಸಿದ್ರು. ಆದ್ರೆ ಹೈಕೋರ್ಟ್​ನಲ್ಲಿ ತನ್ನ ಮಗನಿಗೆ ಜಾಮೀನು ಸಿಗದೇ ಇದ್ದರೂ, ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿ ಬಿಡುತ್ತೆ.

ಹೀಗಾಗಿ ತನ್ನ ಮಗ ಹೊರಗೆ ಬರುವವರೆಗೆ ಯಾರಿಗೂ ಜಾಮೀನು ಸಿಗೋದು ಬೇಡ ಅಂತ, ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಅಡ್ಡಗಾಲು ಹಾಕಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.

ಈ ಸುದ್ದಿಯನ್ನ ಬೆನ್ನತ್ತಿ ಸುವರ್ಣ ನ್ಯೂಸ್​ ಇತರ ಆರೋಪಿಗಳ ಅಡ್ರೆಸ್​ ಹುಡುಕಿಕೊಂಡು ಹೊರಟಿತ್ತು. ಆಸ್ಟಿಂಗ್​ ಟೌನ್​​ 6ನೇ ಕ್ರಾಸ್​ನಲ್ಲಿ ನದೀಂ ಅಲಿ ಬಿಲ್ಡಿಂಗ್​ ಅರುಣ್​ ಬಾಬು ಹಾಗೂ ಮೊಹಮದ್​ ಅಪ್ರಾಸ್​​ ಅವರ ಅಡ್ರೆಸ್​. ಇದು ತನಿಖೆ ವೇಳೆ ಪೊಲೀಸರಿಗೆ ನೀಡಿರುವ ವಿಳಾಸ. ಅಲ್ಲಿಗೆ ಹೋದ ಸುವರ್ಣ ನ್ಯೂಸ್​ ತಂಡಕ್ಕೆ ಮತ್ತೊಂದು ಶಾಕಿಂಗ್​ ನ್ಯೂಸ್​ ಕಾದಿತ್ತು.

loader