ಬೆಳಗಾವಿ(ಅ.1): ನಿನ್ನೆ ಕಾವೇರಿ ವಿಚಾರದ ವಿಚಾರಣೆ ವೇಳೆ ವಾದ ಮಂಡಿಸದೇ ಕರ್ನಾಟಕ ಪರ ವಕೀಲ ಫಾಲಿ ಎಸ್ ನಾರಿಮನ್ ಹಿಂದೆ ಸರಿದಿದ್ದರು. ಹೀಗಾಗಿ ಕೃಷ್ಣಾ-ಕಾವೇರಿ ನ್ಯಾಯಾಧೀಕರಣದ ವಾದ ಮಂಡಿಸಲು ವಕೀಲರಿಗೆ ನೀಡಿದ ಹಣವನ್ನ ರಾಜ್ಯ ಸರ್ಕಾರ ಮರಳಿ ಪಡೆಯಬೇಕೆಂದು ಆರ್'ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷ್ಣಾ-ಕಾವೇರಿ ನ್ಯಾಯಾಧೀಕರಣಕ್ಕೆ ಸರ್ಕಾರ ಈ ವರೆಗೂ 76 ಕೋಟಿ 21 ಲಕ್ಷ ವೆಚ್ಚ ಮಾಡಿದೆ. ಎರಡೂ ನ್ಯಾಯಾಧೀಕರಣದ ಮುಂದೆ ಸಮರ್ಥ ವಾದ ಮಂಡಿಸುವಲ್ಲಿ ವಕೀಲರು ವಿಫಲರಾಗಿದ್ದಾರೆ. ಸರ್ಕಾರ ಕೋಟಿ ಕೋಟಿ ವೆಚ್ಚ ಮಾಡಿದರು ರಾಜ್ಯಕ್ಕೆ ಹಿನ್ನಡೆ ಆಗುತ್ತಿದೆ ಎಂದು ಗಡಾದ್ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred