ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಜಾರ್ಜ್ ವಿರುದ್ಧ ಸಿಬಿಐ ಎಫ್'ಐಆರ್ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ನಿಮ್ಮ ಬಳಿ FIR ಪ್ರತಿ ಇದೆಯಾ? ನನ್ನ ಬಳಿ ಎಫ್'ಐಆರ್ ಪ್ರತಿಯಿಲ್ಲ ಎಂದು ಜಾರ್ಜ್ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು (ಅ.26): ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಜಾರ್ಜ್ ವಿರುದ್ಧ ಸಿಬಿಐ ಎಫ್'ಐಆರ್ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ನಿಮ್ಮ ಬಳಿ FIR ಪ್ರತಿ ಇದೆಯಾ? ನನ್ನ ಬಳಿ ಎಫ್'ಐಆರ್ ಪ್ರತಿಯಿಲ್ಲ ಎಂದು ಜಾರ್ಜ್ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಯಾವಾಗಲೂ ನನ್ನನ್ನು ಟಾರ್ಗೆಟ್ ಮಾಡುತ್ತಾರೆ. 100 ಬಾರಿ ಬಿಜೆಪಿಯವರು ನನ್ನನ್ನು ರಾಜೀನಾಮೆ ಕೇಳಿದ್ದಾರೆ. ನಾನು ರಾಜೀನಾಮೆ ಕೊಟ್ಟಿದ್ದರೆ 100 ಬಾರಿ ಕೊಡಬೇಕಾಗಿತ್ತು. ರಾಜೀನಾಮೆ ಕೊಡುವ ಅಗತ್ಯವಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.
ಸಿಬಿಐ ಯಾವ ಅಂಶ ಆಧರಿಸಿ FIR ದಾಖಲಿಸಿದೆ ಗೊತ್ತಿಲ್ಲ. ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ ಕ್ಲೀನ್'ಚಿಟ್ ನೀಡಿದೆ ಈಗ ಸಿಬಿಐ ತನಿಖೆ ಆರಂಭಿಸಿದೆ, ಸಿಬಿಐ ಮುಕ್ತ ತನಿಖೆ ನಡೆಸಲಿ. ಎರಡು ಮೂರು ತಿಂಗಳಲ್ಲಿ ವರದಿ ಬರುತ್ತೆ, ಆಗ ಪ್ರತಿಕ್ರಿಯೆ ಕೊಡ್ತೀನಿ ಎಂದು ಜಾರ್ಜ್ ಹೇಳಿದ್ದಾರೆ.
ಬಿಜೆಪಿ ಅವರದ್ದು ದುರುದ್ದೇಶದ ರಾಜಕಾರಣ. ಅವರು ಕೇಳಿದಾಗಲೆಲ್ಲ ರಾಜೀನಾಮೆ ಕೊಡುವುದಕ್ಕೆ ಆಗಲ್ಲ ಎಂದು ವಿಧಾನಸೌಧದಲ್ಲಿ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಜಾರ್ಜ್ ಮೇಲೆ FIR ಆಗಿದೆ ಎಂದು ಗೊತ್ತಾಗಿದೆ. ಇದರ ಬಗ್ಗೆ ಸಂಪೂರ್ಣ ವಿವರ ಪಡೆದೇ ಪ್ರತಿಕ್ರಿಯಿಸುತ್ತೇನೆ. ಯಡಿಯೂರಪ್ಪ ಮೇಲೂ FIR ಇಲ್ಲವೇ? ಆದರೆ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರಾ? ಬಿಜೆಪಿ ಪ್ರತಿಭಟನೆಗೆ ನಾವು ಹೆದರಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
