ದೇವರನ್ನು ನಂಬುವಿರಾ..? ಹಾಗಾದ್ರೆ ನಿಮ್ಮ ಆಯಸ್ಸು ಎಷ್ಟು ಗೊತ್ತಾ..?

Do Religious People Really Live Longer
Highlights

ವಿಜ್ಞಾನ, ತಂತ್ರಜ್ಞಾನಗಳು ಸಾಕಷ್ಟುಅಭಿವೃದ್ಧಿಗೊಂಡಿರುವ ಆಧುನಿಕ ಕಾಲಘಟ್ಟದಲ್ಲಿ ಪೂಜೆ, ಪುನಸ್ಕಾರ, ಮತ್ತು ಆಚಾರ-ವಿಚಾರಗಳ ಪಾಲನೆ ಮಾಡಲು ಅಸಡ್ಡೆ ತೋರುವುದು ಸಾಮಾನ್ಯ. ಆದರೆ, ದೇವರು ದಿಂಡಿರನ್ನು ನಂಬದ ನಾಸ್ತಿಕರಿಗಿಂತಲೂ ದೇವರ ನಂಬುವ ಆಸ್ತಿಕರು 4 ವರ್ಷಗಳ ಕಾಲ ಹೆಚ್ಚು ಬದುಕುತ್ತಾರೆ ಎಂಬ ಅಚ್ಚರಿ ವಿಚಾರವು ಅಮೆರಿಕದ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ. 

ವಾಷಿಂಗ್ಟನ್‌: ವಿಜ್ಞಾನ, ತಂತ್ರಜ್ಞಾನಗಳು ಸಾಕಷ್ಟುಅಭಿವೃದ್ಧಿಗೊಂಡಿರುವ ಆಧುನಿಕ ಕಾಲಘಟ್ಟದಲ್ಲಿ ಪೂಜೆ, ಪುನಸ್ಕಾರ, ಮತ್ತು ಆಚಾರ-ವಿಚಾರಗಳ ಪಾಲನೆ ಮಾಡಲು ಅಸಡ್ಡೆ ತೋರುವುದು ಸಾಮಾನ್ಯ. ಆದರೆ, ದೇವರು ದಿಂಡಿರನ್ನು ನಂಬದ ನಾಸ್ತಿಕರಿಗಿಂತಲೂ ದೇವರ ನಂಬುವ ಆಸ್ತಿಕರು 4 ವರ್ಷಗಳ ಕಾಲ ಹೆಚ್ಚು ಬದುಕುತ್ತಾರೆ ಎಂಬ ಅಚ್ಚರಿ ವಿಚಾರವು ಅಮೆರಿಕದ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.

ಅಮೆರಿಕದಾದ್ಯಂತ ಸಾವಿಗೀಡಾದ ಸುಮಾರು 1000 ಮಂದಿಯ ಲಿಂಗ ಮತ್ತು ವೈವಾಹಿಕ ಜೀವನ, ಸಾಮಾಜಿಕ ಮತ್ತು ಸ್ವಯಂಪ್ರೇರಿತ ಕಾರ್ಯಚಟುವಟಿಕೆಗಳನ್ನು ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ಇದರ ಪ್ರಕಾರ ನಾಸ್ತಿಕರಿಗಿಂತ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು 9.45 ವರ್ಷಕ್ಕಿಂತ ಹೆಚ್ಚು ವರ್ಷ ಜೀವಿಸಿರುವುದು ಕಂಡುಬಂದಿದೆ ಎಂದು ಒಹಿಯೊ ರಾಜ್ಯ ಸ್ಟೇಟ್‌ ವಿವಿಯ ವೈದ್ಯಕೀಯ ವಿದ್ಯಾರ್ಥಿ ಲೌರಾ ವಾಲ್ಲಾಸ್‌ ತಿಳಿಸಿದ್ದಾರೆ.

ವ್ಯಕ್ತಿಯ ದೀರ್ಘಾಯುಷ್ಯ ಮತ್ತು ಆಸ್ತಿಕತೆ ನಡುವಿರುವ ಸಂಬಂಧಕ್ಕೆ ಈ ಅಧ್ಯಯನ ವರದಿಯು ಸಾಕಷ್ಟುಪುರಾವೆಗಳನ್ನು ಒದಗಿಸುತ್ತದೆ ಎಂದು ಒಹಿಯೊ ವಿವಿಯ ಪ್ರೊಫೆಸರ್‌ ಬಾಲ್ಡ್‌ವಿನ್‌ ವೇ ಹೇಳಿದ್ದಾರೆ.

loader