‘ಟಿವಿ ಚರ್ಚೆಯಲ್ಲಿ ಭಾಗವಹಿಸುವವರಿಗೆ ನಾನು ವಿನಂತಿಸಿಕೊಳ್ಳುವುದೇನೆಂದರೆ ಮಹಿಳಾ ಹಕ್ಕಿನ ವಿಚಾರವನ್ನು ಹಿಂದೂ ಮುಸ್ಲೀಂ ವಿಚಾರವನ್ನಾಗಿ ಮಾಡಬೇಡಿ. ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವುದೆಂದರೆ ಅಭಿವೃದ್ಧಿಯ ಬಗ್ಗೆ ಮಾತನಾಡುವುದು. ಚರ್ಚೆಯು ಸುಧಾರಣೆಯನ್ನು ಬಯಸುವ ಮುಸ್ಲೀಮರು ಮತ್ತು ಸುಧಾರಣೆ ಬಯಸದ ಮುಸ್ಲೀಮರ ನಡುವೆ ಇರಬೇಕು’ ಎಂದು ಪ್ರಧಾನಿ ಮೋದಿ ವಿನಂತಿಸಿಕೊಂಡಿದ್ದಾರೆ.
ನವದೆಹಲಿ (ಅ.24): ಪ್ರಧಾನಿ ನರೇಂದ್ರ ಮೋದಿ ಮುಸ್ಲೀಂ ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುತ್ತಾ ಟ್ರಿಪಲ್ ತಲಾಖನ್ನು ರಾಜಕೀಯಗೊಳಿಸಬೇಡಿ ಎಂದರು.
ಟ್ರಿಪಲ್ ತಲಾಖಿಂದ ಮಹಿಳೆಯರ ಜೀವನ ಸಂಕಷ್ಟಕ್ಕೊಳಪಡುತ್ತದೆ. ಇದು ಒಳ್ಳೆಯದಲ್ಲ. ರಾಜಕಾರಣಿಗಳು ಮತ್ತು ಟಿವಿ ಚರ್ಚೆಯಲ್ಲಿ ಭಾಗವಹಿಸುವವರು ಇದನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.