ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಬೇಕು ಎಂಬ ವಾದಕ್ಕೆ ತಮಿಳುನಾಡಿನಲ್ಲಿ ಭಾರೀ ವಿರೋಧ | ರೈಲ್ವೆ ನಿಲ್ದಾಣದಲ್ಲಿನ ಹಿಂದಿ ಫಲಕಕ್ಕೆ ಮಸಿ ಬಳಿದ ಡಿಎಂಕೆ ಕಾರ್ಯಕರ್ತರು| 

ಚೆನ್ನೈ[ಸೆ.19]: ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಬೇಕು ಎಂಬ ವಾದಕ್ಕೆ ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಇದು ಇಂಡಿಯಾ, ಹಿಂಡಿಯಾ ಅಲ್ಲ: ಸ್ಟಾಲಿನ್ ಅಬ್ಬರಕ್ಕೆ 'ಉತ್ತರ' ತತ್ತರ!

ಡಿಎಂಕೆ ಕಾರ್ಯಕರ್ತರು ವೆಲ್ಲೂರು ಜಿಲ್ಲೆಯ ಗುಡಿಯಟ್ಟಂ ರೈಲ್ವೆ ನಿಲ್ದಾಣದಲ್ಲಿನ ಹಿಂದಿ ಬರಹಗಳ ಮೇಲೆ ಕಪ್ಪು ಮಸಿ ಬಳಿದು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ದಿವಸ್‌ ದಿನದಂದು ಗೃಹ ಸಚಿವ ಅಮಿತ್‌ ಶಾ ಅವರು ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ಹಿಂದಿಯೇತರ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಅತ್ತ ದೇಶಕ್ಕೊಂದೇ ಭಾಷೆ ಎಂದ ಶಾ: ಇತ್ತ ಹಿಂದಿ ದಿನ ಆಚರಣೆಗೆ ಸಿದ್ದು ವಿರೋಧ!

ತಮಿಳುನಾಡಿನ ರೈಲ್ವೆ ನಿಲ್ದಾಣದಲ್ಲಿ ಫಲಕಗಳ ಮೇಲಿನ ಹಿಂದಿ ಬರಹಗಳ ಮೇಲೆ ಮಸಿ ಬಳಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಹಿಂದಿ ಹೇರಿಕೆಯ ವಿರುದ್ಧ ಸೆ. 20 ತಮಿಳುನಾಡಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.