ಯಾವ ಜನ‌ ಮೋದಿಯವರನ್ನು ಆಯ್ಕೆ ಮಾಡಿ ಕಳಿಸಿದ್ರೋ ಅವರೇ ಈಗ ಮೋದಿಯನ್ನು ಇಳಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು(ನ.09): ಕಪ್ಪುಹಣ ತಡೆಗೆ ಪ್ರಧಾನಮಂತ್ರಿ ಮೋದಿ ಈ ದಿಢೀರ್ ನಿರ್ಧಾರದಿಂದ ಶಾಕ್ ಕೊಟ್ಟಿದ್ದಾರೆ. ಜನಸಾಮಾನ್ಯರು ಏನೂ ಎಟಿಎಂ ಇಟ್ಟುಕೊಂಡಿರಲ್ಲ. ನಿನ್ನೆ ಚನ್ನಪಟ್ಟಣದ ಸಮೀಪ ಹೊಟೇಲ್`ಗಳಲ್ಲಿ ಊಟ ಕೊಡುತ್ತಿರಲಿಲ್ಲ. ನಾನೂ ಕೂಡ ಮನೆಯಲ್ಲಿ ಹುಡುಕಿ ನೂರು ರೂಪಾಯಿಗಳನ್ನು ತಂದು ನಮ್ಮ ಡ್ರೈವರ್`ಗಳಿಗೆ ಕೊಡುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಯಾವ ಜನ ಮೋದಿಯವರನ್ನು ಆಯ್ಕೆ ಮಾಡಿ ಕಳಿಸಿದ್ರೋ ಅವರೇ ಈಗ ಮೋದಿಯನ್ನು ಇಳಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
