ಬೆಂಗಳೂರು(ಅ.06): ಬಹುನಿರೀಕ್ಷಿತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಅಭಿನಯದ ಜಾಗ್ವಾರ್ ಸಿನಿಮಾ ತೆರೆ ಕಂಡಿದೆ. ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ವಂಶದ ಕುಡಿಯ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತ, ನಿಖಿಲ್ ಅಭಿನಯದ ‘ಜಾಗ್ವಾರ್’​ ಸಿನಿಮಾಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಹ ಶುಭ ಹಾರೈಸಿದ್ದಾರೆ. ನಿಖಿಲ್​ ಗೌಡರು ನಟನೆಯಿಂದ ಹೆಚ್ಚಿನ ಅಭಿಮಾನಿಗಳನ್ನ ಗಳಿಸಲಿ, ಅವರು ಸಿನಿಮಾ ರಂಗದ ಮೂಲಕ ನಾಡಿನ ಸೇವೆ ಮಾಡಲಿ. ಸಿನಿಮಾ ನಂತರ ರಾಜಕಾರಣಕ್ಕೆ ಬರಬಹುದು. ನಿಖಿಲ್​ ಸಿನಿಮಾಗೆ ಯಶಸ್ಸು​ ಸಿಗಲಿ ಎಂದು ಡಿ.ಕೆ. ಶಿವಕುಮಾರ್ ಹಾರೈಸಿದ್ದಾರೆ.