ನಮ್ಮ ಪಕ್ಷವನ್ನ ಯಾರೂ ಸಹ ಅಷ್ಟು ಸಲೀಸಾಗಿ ಬಿಟ್ಟು ಹೋಗಲ್ಲ. ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್‌ಗೆ ಬಹಳ ಸಹಕಾರ ನೀಡಿದ್ದು ಅವರ ನೀರಾವರಿ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡಿದೆ.

ಕನಕಪುರ(ಸೆ.26): ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಕಾಂಗ್ರೇಸ್ ಪಕ್ಷಕ್ಕೆ ಯಾವುದೇ ಕಾರಣಕ್ಕೂ ದ್ರೋಹ ಮಾಡಲ್ಲ. ಬಿಜೆಪಿಗೆ ಸೇರ್ಪಡೆಯಾಗ್ತಾರೆ ಅನ್ನೋದು ಕೇವಲ ಊಹಾಪೋಹಾ ಅಷ್ಟೇ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ತಾಲ್ಲೂಕಿನ ಮಾವತ್ತೂರು ಗ್ರಾಮದ ಕೆರೆಗೆ ಬಾಗೀನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ನಮ್ಮ ಪಕ್ಷವನ್ನ ಯಾರೂ ಸಹ ಅಷ್ಟು ಸಲೀಸಾಗಿ ಬಿಟ್ಟು ಹೋಗಲ್ಲ. ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್‌ಗೆ ಬಹಳ ಸಹಕಾರ ನೀಡಿದ್ದು ಅವರ ನೀರಾವರಿ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡಿದೆ. ಅವರು ಹೇಳಿದವರಿಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್‌ಗಳಲ್ಲಿ ಟಿಕೆಟ್ ಸಹ ನೀಡಿದ್ದು ಸರ್ಕಾರ ಬೆಂಬಲವಾಗಿ ನಿಂತಿದೆ. ಅವರು ಯಾವುದೆ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಲ್ಲ. ಇದೆಲ್ಲ ಮಾಧ್ಯಮಗಳ ಊಹಾಪೋಹಾ ಎಂದು ತಿಳಿಸಿದರು.

ಬರಗಾಲದಿಂದ ಕಳೆದ 5 ವರ್ಷಗಳಿಂದ ಭರ್ತಿಯಾಗದಿದ್ದ 153 ಎಕರೆ ವಿಸ್ತೀರ್ಣದ ದೊಡ್ಡಕೆರೆ ಈ ಬಾರಿಯ ಉತ್ತಮ ಮಳೆಗೆ ಕೋಡಿ ಹೊಡೆದಿದ್ದು, ಈ ಹಿನ್ನೆಲೆಯಲ್ಲಿ ಇಂದು ಕೆರೆಗೆ ಬಾಗೀನ ಅರ್ಪಿಸಲಾಯಿತು.