ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಡಿಕೆಶಿ ಪ್ರತಿಕ್ರಿಯೆ

ರಾಯಚೂರು(ಆ.12): ಚಿತ್ರನಟ ಉಪೇಂದ್ರ ಅವರ ರಾಜಕೀಯ ಪ್ರವೇಶಕ್ಕೆ ಸಂಪೂರ್ಣ ಸ್ವಾಗತ. ಜಾತ್ಯತೀತ ತತ್ವದಡಿ ಎಲ್ಲ ವರ್ಗದವರನ್ನು ಸೇರಿಸಿಕೊಂಡು ಪಕ್ಷ ಕಟ್ಟಲಿ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಶಕ್ತಿನಗರದ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಇಷ್ಟು ದಿನ ಬಣ್ಣ ಹಚ್ಚಿಕೊಂಡು ಸಿನಿಮಾ ಮಾಡುತ್ತಿದ್ದ ಉಪೇಂದ್ರ ಬಣ್ಣ ಹಚ್ಚದೇ ರಾಜಕೀಯ ಮಾಡಲಿ, ರಾಜಕೀಯ ಮೂಲಕ ಜನರ ಸೇವೆ ಮಾಡುವ ಅವರ ನಿರ್ಧಾರವನ್ನು ಸಂಪೂರ್ಣ ಸ್ವಾಗತಿಸಿ ಯಶಸ್ಸು ಸಿಗಲಿ ಎಂದು ಶುಭಕೋರುವೆ ಎಂದರು.