ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಶಿವಕುಮಾರ್ ಅವರು ಹಲವು ನಾಯಕರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಬೆಂಗಳೂರು(ಮೇ.30):ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದರೂ ಹೈಕಮಾಂಡ್ ಗೃಹಖಾತೆಯ ಬಂಪರ್ ಗಿಫ್ಟ್ ನೀಡಿದೆ.

ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಶಿವಕುಮಾರ್ ಅವರು ಹಲವು ನಾಯಕರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಬಲ ಸಮುದಾಯದ ಡಿಕೆಶಿಗೆ ಪರಮೇಶ್ವರ ನಿರ್ವಹಿಸುತ್ತಿದ್ದ ಎರಡನೇ ಬಹು ಮುಖ್ಯ ಖಾತೆ ಗೃಹ ಖಾತೆ ನೀಡಲಾಗಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕಿದೆಯಷ್ಟೆ.