ಕಾಂಗ್ರೆಸ್'ನತ್ತ ಕನಸಿನ ರಾಣಿ, ಸಾಧು ಚಿತ್ತ

DKS Meet Malashree and Sadhu Kokila
Highlights

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಆಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಈ ಇಬ್ಬರೂ ನಟರು  ಇಂದು ಭೇಟಿ ಮಾಡಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು(ಜ.10): ಕಾಂಗ್ರೆಸ್ ಪಕ್ಷದತ್ತ ಇಬ್ಬರು ಪ್ರಮುಖ ಚಿತ್ರನಟರು ಮುಖ ಮಾಡುವ ಸಾಧ್ಯತೆಯಿದೆ. ಕನಸಿನ ರಾಣಿ ಎಂದೇ ಖ್ಯಾತರಾಗಿರುವ ನಾಯಕನಟಿ ಮಾಲಾಶ್ರೀ ಹಾಗೂ ಹಾಸ್ಯ ಕಲಾವಿದ ಸಾಧು ಕೋಕಿಲಾ ಹಸ್ತ ಪಕ್ಷಕ್ಕೆ ಕೈ ಚಾಚಲಿದ್ದಾರೆ ಎನ್ನುತ್ತವೆ ಮೂಲಗಳು.

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಆಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಈ ಇಬ್ಬರೂ ನಟರು  ಇಂದು ಭೇಟಿ ಮಾಡಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ ಎನ್ನಲಾಗಿದೆ. ಇವರಿಬ್ಬರನ್ನು ಸ್ಟಾರ್ ಕ್ಯಾಂಪೇನರ್ ಆಗಿ ಬಳಸುವ ಸಾಧ್ಯತೆಯಿದೆ.  ಡಿ.ಕೆ. ಶಿವಕುಮಾರ್ ಆಯೋಜಿಸಲಿರುವ ಕನಕೋತ್ಸವ ಕಾರ್ಯಕ್ರಮದಲ್ಲೂ ಸಾಧುಕೋಕಿಲ ಮತ್ತು ಮಾಲಾಶ್ರೀ ಭಾಗಿಯಾಗಲಿದ್ದಾರೆ.

loader