ರಾಜ್ಯ ಕಾಂಗ್ರೆಸ್'ನಲ್ಲಿ ಪ್ರಭಾವಿ ನಾಯಕಿಯಾಗಿರುವ ರಮ್ಯಾ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತುಂಬ ಆಪ್ತರಾಗಿದ್ದಾರೆ. ಪರಮೇಶ್ವರ್ ಅವರ ಪರ ಬ್ಯಾಟಿಂಗ್ ಆಡಿದ್ದು ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ರಾಹುಲ್ ಗಾಂಧಿ ಅವರಲ್ಲಿ ಪ್ರಬಲವಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು(ಮೇ.30): ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಲು ಮೋಹಕ ತಾರೆ ಹಾಗೂ ಮಾಜಿ ಸಂಸದೆ ರಮ್ಯಾ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

ರಾಜ್ಯ ಕಾಂಗ್ರೆಸ್'ನಲ್ಲಿ ಪ್ರಭಾವಿ ನಾಯಕಿಯಾಗಿರುವ ರಮ್ಯಾ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತುಂಬ ಆಪ್ತರಾಗಿದ್ದಾರೆ. ಪರಮೇಶ್ವರ್ ಅವರ ಪರ ಬ್ಯಾಟಿಂಗ್ ಆಡಿದ್ದು ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ರಾಹುಲ್ ಗಾಂಧಿ ಅವರಲ್ಲಿ ಪ್ರಬಲವಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದರ ಜೊತೆಗೆ ಡಿ.ಕೆ. ಶಿವಕುಮಾರ್ ವಿರುದ್ಧ ಅಪಸ್ವರ ಎತ್ತಿರುವ ರಮ್ಯಾ, ಪರಮೇಶ್ವರ್ ಹಾಗೂ ಡಿಕೆಶಿ ಇಬ್ಬರ ಬಗ್ಗೆ ಸೂಚ್ಯವಾಗಿ ಮನವರಿಕೆ ಮಾಡಿಕೊಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್'ಗೆ ಬಹುಮತ ಸಿಗದೆ ಅಂತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡುಕೊಳ್ಳಲು ಪರಮೇಶ್ವರ್ ಅವರೆ ಸೂಕ್ತ ವ್ಯಕ್ತಿ ಎಂಬುದಾಗಿ ಮನವರಿಕೆ ಮಾಡಿರುವುದಾಗಿ ತಿಳಿದು ಬಂದಿದೆ.

ಗೃಹ ಖಾತೆ ?

ರಮ್ಯಾ ಅಪಸ್ವರ ಎತ್ತಿರುವ ಬಗ್ಗೆ ಸಂಸದರು ಆಗಿರುವ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಆಪ್ತರು ಹಾಗೂ ಬೆಂಬಲಿಗರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಹುತೇಕ ಕೆಪಿಸಿಸಿ ಅಧ್ಯಕ್ಷರ ಹುದ್ದೆ ಫೈನಲ್ ಆಗಿದ್ದು, ಜಿ. ಪರಮೇಶ್ವರ್ ಮುಂದುವರಿಯುವುದು ಖಚಿತವಾಗಿದೆ.