ನನ್ನ ಫೋನ್ ಕೂಡಾ ಕದ್ದಾಲಿಕೆ‌ ಆಗಿದೆ.‘ನಿತ್ಯ ನನ್ನನ್ನು ಫಾಲೋ ಮಾಡ್ತಿದ್ದಾರೆ, ಎಲ್ಲಿ ಹೋಗ್ತೀನಿ ಅತ್ತ ಹಿಂದೆ ಬಿದ್ದಿದ್ದಾರೆ’.

ಬೆಂಗಳೂರು(ನ.07): ಕೆಲ ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಆದರೆ ಕೆಲವರು ಇಡಿ, ಸಿಬಿಐ ಅಂತ ಇಲ್ಲ ಸಲ್ಲದ ಸುದ್ದಿಗಳನ್ನು ಹಾಕ್ತಿದ್ದಾರೆ. ನಾನು‌ ಕನಕಪುರ ಬಂಡೆಯಿಂದ ಬಂದವನು.ಬಂಡೆಗೆ ತಲೆ ಚೆಚ್ಚಿಕೊಂಡ್ರೆ ತಲೆ ಒಡೆದು‌ ಹೋಗುತ್ತೆ ಹುಷಾರ್.ಇದಕ್ಕೆಲ್ಲ ನಾನು ಹೆದರೊಲ್ಲ'ಎಂದು ಮಾಧ್ಯಮಗಳ ಮೇಲೆ' ಇಂದನ ಸಚಿವ ಡಿ.ಕೆ. ಶಿವಕುಮಾರ್ ಗರಂ ಆಗಿ ಮಾತನಾಡಿದರು.

ಐಟಿ ವಿಚಾರಣೆ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಐಟಿ ವಿಚಾರಣೆ ಬರೋದು‌ ಬೇಡ ಅಂತ ಹೇಳಿದರು. ಈ ಸಂದರ್ಭದಲ್ಲಿ ಫೋನ್ ಟ್ಯಾಪ್ ಬಗ್ಗೆ ಮಾತನಾಡಿ,‘ನನ್ನ ಫೋನ್ ಕೂಡಾ ಕದ್ದಾಲಿಕೆ‌ ಆಗಿದೆ.‘ನಿತ್ಯ ನನ್ನನ್ನು ಫಾಲೋ ಮಾಡ್ತಿದ್ದಾರೆ, ಎಲ್ಲಿ ಹೋಗ್ತೀನಿ ಅತ್ತ ಹಿಂದೆ ಬಿದ್ದಿದ್ದಾರೆ’. ‘ಕೆಲವು ಸಂಸ್ಥೆಗಳಿಗೆ ಫೋನ್ ಟ್ಯಾಪ್​ ಮಾಡುವ ಅಧಿಕಾರ ಇರುತ್ತೆ’. ‘ಇಂತಹವರೇ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ ಅಂತ ಹೇಗೆ ಹೇಳೋದು?’‘ನಾನು ರಾಜಕೀಯಕ್ಕೆ ಬಂದಾಗಿನಿಂದ ನಿರಂತರವಾಗಿ ಕಣ್ಣಿಟ್ಟಿದ್ದಾರೆ’.ಇದ್ಯಾವುದರ ಬಗ್ಗೆ ನಾನು ತಲೆನೇ ಕೆಡಿಸಿಕೊಳ್ಳೊಲ್ಲ ' ಎಂದು ಹೇಳಿದರು.