ನವದೆಹಲಿ[ಸೆ.16]: ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಜಾಮೀನು ಅರ್ಜಿ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ದ ವಶದ ಬಗ್ಗೆ ಪಿಎಂelf ನ್ಯಾಯಾಲಯದಲ್ಲಿ ಸೆ.17ಕ್ಕೆ ಮುಂದಿನ ವಿಚಾರಣೆ ಇದ್ದು, ಅಂದು ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ದೆಹಲಿಗೆ ಬರಬೇಡಿ ಎಂದು ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಮನವಿ ಮಾಡಿದ್ದಾರೆ.

ಸೆಲ್ಫಿಗೆ ಬಂದ ಫ್ಯಾನ್ ಮೊಬೈಲ್ ಪೀಸ್ ಪೀಸ್.. ಇದು ಡಿಕೆ ಸುರೇಶ್! ವಿಡಿಯೋ

ಇದು ಡಿ.ಕೆ.ಶಿವಕುಮಾರ್‌ ಅವರ ಆಶಯವೂ ಹೌದು ಎಂದು ಡಿ.ಕೆ. ಸುರೇಶ್‌ ತಮ್ಮ ವಿನಂತಿ ಪತ್ರದಲ್ಲಿ ತಿಳಿಸಿದ್ದಾರೆ. ‘ನೀವು ಕರ್ನಾಟಕದಲ್ಲಿ ಇರುವ ಜಾಗದಲ್ಲೇ ಇರಿ. ದೆಹಲಿಗೆ ಹೆಚ್ಚು ಜನ ಬರುವುದರಿಂದ ಆಡಳಿತ ಮತ್ತು ನ್ಯಾಯಾಂಗಕ್ಕೆ ತೊಂದರೆಯಾಗುತ್ತಿದೆ. ಕಾನೂನು ಪಾಲಿಸುವ ನಾಗರಿಕರಾಗಿ ಆಡಳಿತ ಮತ್ತು ನ್ಯಾಯಾಂಗಕ್ಕೆ ತೊಂದರೆಯಾಗದಂತೆ ಇರುವುದು ನಮ್ಮ ಜವಾಬ್ದಾರಿ. ಆದ್ದರಿಂದ ಎಲ್ಲರ ಸಹಕಾರ ಕೋರುತ್ತಿದ್ದೇನೆ’ ಎಂದು ಹೇಳಿದ್ದಾರೆ.