ಜ್ಯೋತಿಷ್ಯ ಕಲಿತರಾ ಸಚಿವ ಸದಾನಂದ ಗೌಡ..?

DK Shivakumat Slams Union Minister Sadananda Gowda
Highlights

ಕೇಂದ್ರ ಸಚಿವ ಸದಾನಂದಗೌಡರು ಯಾವಾಗ ಜ್ಯೋತಿಷ್ಯ ಕಲಿತರೋ ತಿಳಿದಿಲ್ಲ. ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಸರ್ಕಾರದ ಆಯುಷ್ಯದ ಬಗ್ಗೆ ವಿವೇಕ ಇಲ್ಲದೇ ಮಾತನಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. 

ಹಾಸನ: ಕೇಂದ್ರ ಸಚಿವ ಸದಾನಂದಗೌಡರು ಯಾವಾಗ ಜ್ಯೋತಿಷ್ಯ ಕಲಿತರೋ ತಿಳಿದಿಲ್ಲ. ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಸರ್ಕಾರದ ಆಯುಷ್ಯದ ಬಗ್ಗೆ ವಿವೇಕ ಇಲ್ಲದೇ ಮಾತನಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. 

ಸಕಲೇಶಪುರದಲ್ಲಿ  ಮಾತನಾಡಿದ ಸಚಿವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ 5 ವರ್ಷ ಆಡಳಿತ ನಡೆಸುವುದರಲ್ಲಿ ಯಾವುದೇ ಅನುಮಾನ ಬೇಡ.

ಬಿಜೆಪಿಯವರು ಹೊಟ್ಟೆ ನೋವಿನಿಂದ ಏನೇನೊ ಹೇಳುತ್ತಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷ ಮಲಗಿದೆ. ಅವರು ಮೊದಲು ಎಚ್ಚರವಾಲಿ ಎಂದು ವ್ಯಂಗ್ಯವಾಡಿದರು.

loader