ಬೆಂಗಳೂರು [ಜು.18] : ಕರ್ನಾಟಕ ಸರ್ಕಾರಕ್ಕೆ ಇಂದು ಅಳಿವು ಉಳಿವಿನ ದಿನವಾಗಿದೆ. ಮುಖ್ಯಮಂತ್ರಿ ವಿಶ್ವಾಸ ಮತ ಯಾಚನೆಗೆ ಸಿದ್ಧರಾಗಿದ್ದಾರೆ. 

ಇದೇ ವೇಳೆ ಅತೃಪ್ತರಾಗಿ ಮುಂಬೈಗೆ ಹೋಗಿ ಕುಳಿತುಕೊಂಡಿರುವ ಶಾಸಕರಿಗೆ ಸಚಿವ ಡಿ.ಕೆ.ಶಿವಕುಮಾರ್ ವಾರ್ನಿಂಗ್ ನೀಡಿದ್ದಾರೆ. 

ಪರೋಕ್ಷವಾಗಿ ಅತೃಪ್ತ ಶಾಸಕರಿಗೆ ಅನರ್ಹತೆ ಬಗ್ಗೆ ಎಚ್ಚರಿಸಿದ್ದಾರೆ. ಕಾನೂನಾತ್ಮಕವಾಗಿ ವಿಪ್ ಜಾರಿಯಾಗಿದೆ, ವಿಶ್ವಾಸಮತ ಯಾಚನೆ ಇದ್ದು, ಎಲ್ಲರೂ ಬರುವ ನಂಬಿಕೆ ಇದೆ ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

ಇನ್ನು ನಮ್ಮಲ್ಲಿ ಅತೃಪ್ತತೆ ಯಾರಿಗೂ ಇಲ್ಲ. ಎಲ್ಲರೂ ನಮ್ಮವರೇ, ಕಾಂಗ್ರೆಸ್ ಕಟ್ಟಿ ಬೆಳೆಸಿದವರು. ಇಲ್ಲಿಯೇ ಗೆದ್ದವರು. ಆದ್ದರಿಂದ ಇಲ್ಲಿಯೇ ಇರುತ್ತಾರೆ ಎನ್ನುವ ನಂಬಿಕೆ ಇದೆ ಎಂದರು. 

ಎಲ್ಲಾ ಶಾಸಕರು ಬರುತ್ತಾರೆ ಎನ್ನುವ ವಿಶ್ವಾಸ ಇದೆ.ಯಾರೂ ಅವರ ಶಾಸಕ‌ ಸ್ಥಾನ‌ ಕಳೆದುಕೊಳ್ಳಲು  ಇಷ್ಟ ಪಡುವುದಿಲ್ಲ. ಮಂತ್ರಿ ಆಗಲು ಹೊರಟ ಅವರನ್ನು ನಾವೇ ಮಂತ್ರಿ ಮಾಡುತ್ತೇವೆ ಎಂದರು.