ಬೆಂಗಳೂರು [ಜು.23]: ICU ನಲ್ಲಿರುವ ಒಂದು ವರ್ಷ ಎರಡು ತಿಂಗಳ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಭವಿಷ್ಯ ಇನ್ನೊಂದು ಗಂಟೆಯಲ್ಲಿ ಏನಾಗುತ್ತೆ ಎಂಬುವುದು ಸ್ಫಷ್ಟವಾಗಲಿದೆ. ಇತ್ತ ಕಾಂಗ್ರೆಸ್ ನಾಯಕರು, ಏನಾದರೂ ಮಾಡಿ, ಹೇಗಾದರೂ ಸರ್ಕಾರವನ್ನು ಉಳಿಸುವ ಯತ್ನದಲ್ಲಿ ಇನ್ನೂ ಇದ್ದಾರೆ. ಬಂಡಾಯ ನಾಯಕರಿಗೆ ಮನವಿ ಮಾಡಿದ್ದಾಯ್ತು, ನೋಟಿಸ್ ಕೊಟ್ಟಿದ್ದಾಯ್ತು, ಎಚ್ಚರಿಸಿದ್ದಾಯ್ತು, ಅನರ್ಹತೆಯ ಭಯ ತೋರಿಸಿದ್ದಾಯ್ತು, ಯಾವುದೇ ಯತ್ನವೂ ಫಲ ಕೊಡುವಂತೆ ತೋಚುತ್ತಿಲ್ಲ. ಇದೀಗ ಹೊಸ ಯತ್ನಕ್ಕೆ ಕೈ ಹಾಕಿದ್ದಾರೆ.

ಟ್ರಬಲ್ ಶೂಟರ್ ಕೊನೆಯವರೆಗೂ ನಡೆಸಿದ ಆಟವೂ ನಡೆಯದ ಕಾರಣ ಕರೆದು ಸಚಿವಗಿರಿ ಕೊಟ್ಟಿದ್ದ ಪಕ್ಷೇತರ ಹಾಗೂ ಕೆಪಿಜೆಪಿ ಶಾಸಕರ ವಿರುದ್ಧ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಂಗಲ್ ಬಳಿ ಮಾತನಾಡಿದ ಡಿಕೆಶಿ ಪಕ್ಷೇತರರನ್ನು ಇಲ್ಲಿಂದ ಒಂದು ಕಿ.ಮೀ ದೂರದಲ್ಲಿ ಬಿಜೆಪಿಯವರು ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಮುಳುಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶ್ ಹಾಗೂ ರಾಣೆಬೆನ್ನೂರು ಕ್ಷೇತ್ರದ KPJP ಶಂಕರ್ ಬಿಜೆಪಿ ವಶದಲ್ಲಿದ್ದು, ಅದು ಹೇಗೆ ಅವರ ಪರ ಕೈ ಎತ್ತುತ್ತಾರೋ ನಾನೂ ನೋಡ್ತೀನಿ ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.