‘ಮುಂದಿನ ಮುಖ್ಯಮಂತ್ರಿ ನಾನೇ ಎಂದು ಎಲ್ಲಿಯೂ ಹೇಳಿಲ್ಲ. ಅರ್ಜೆಂಟ್‌ನಲ್ಲಿ ಇರುವವರು ರೇಸ್ ಮುಗಿಸಲಿ. ತಾಳ್ಮೆಯಿಂದ ಕಾಯಲು ನಾನು ತಯಾರಿದ್ದೇನೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.

ರಾಮನಗರ: ‘ಮುಂದಿನ ಮುಖ್ಯಮಂತ್ರಿ ನಾನೇ ಎಂದು ಎಲ್ಲಿಯೂ ಹೇಳಿಲ್ಲ. ಅರ್ಜೆಂಟ್‌ನಲ್ಲಿ ಇರುವವರು ರೇಸ್ ಮುಗಿಸಲಿ. ತಾಳ್ಮೆಯಿಂದ ಕಾಯಲು ನಾನು ತಯಾರಿದ್ದೇನೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ನಾನು ಯಾರಿಗೂ ಅರ್ಜೆಂಟ್ ಮಾಡಬೇಡಿ, ಎಲ್ಲರದು ಮುಗಿಯಲಿ ಎಂದಷ್ಟೇ ಹೇಳಿದ್ದೇನೆ. ಶುಭ ಗಳಿಗೆ ಬರಬೇಕಾದರೆ ಬರುತ್ತದೆ, ಅದಕ್ಕೆ ಆತುರ ಪಡಬೇಕಾಗಿಲ್ಲ ಎಂದರು.

‘ಈಗ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಾಗುತ್ತೇನೆ. ಬಹಳ ಅರ್ಜೆಂಟ್‌ನಲ್ಲಿ ಇರುವವರು ರೇಸ್ ಮುಗಿಸಲಿ. ನಾನು ತಾಳ್ಮೆಯಿಂದ ಕಾಯುತ್ತೇನೆ’ ಎಂದು ಹೇಳಿದರು.