ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ಇಬ್ಬರೂ ಸೇರಿಕೊಂಡು ನನ್ನನ್ನು ಜೈಲಿಗೆ ಕಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಆರೋಪಿಸಿದರು. 

ಲಕ್ಷ್ಮೇಶ್ವರ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ಇಬ್ಬರೂ ಸೇರಿಕೊಂಡು ನನ್ನನ್ನು ಜೈಲಿಗೆ ಕಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಆರೋಪಿಸಿದರು. ಇದರೊಂದಿಗೆ ತಮ್ಮ ಮೇಲೆ ನಡೆದ ಆದಾಯ ಇಲಾಖೆ ದಾಳಿಗೆ ಬಿಜೆಪಿ ಮುಖಂಡರೇ ಕಾರಣ ಎಂದು ದೂರಿದರು. 

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದ್ದು, ಬಿಜೆಪಿ ಮುಖಂಡರು ಸುಪ್ರೀಂಕೋರ್ಟ್‌ನಂತೆ ಮಾತನಾಡುತ್ತಿರುವುದು ನನ್ನ ಈ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. 

ಬಳ್ಳಾರಿ ಜನರ ಮೇಲೆ ಶ್ರೀರಾಮುಲುಗೆ ವಿಶ್ವಾಸವಿಲ್ಲ. ಇದೇ ಕಾರಣಕ್ಕಾಗಿ ವಿಧಾನಸಭೆ ಚುನಾವಣೆ ವೇಳೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸಿದರು. ಅಲ್ಲದೇ ಬಳ್ಳಾರಿಯಲ್ಲಿ ಅವರ ಟೀಂ ಅಧಿಕಾರ ನಡೆಸುತ್ತಿದ್ದಾಗ ಒಂದು ರೀತಿಯ ಭಯದ ವಾತಾವರಣ ನಿರ್ಮಿಸಿದ್ದರು. ಅದನ್ನು ಹೋಗಲಾಡಿಸಿ ಈಗ ನೆಮ್ಮದಿಯ ವಾತಾವರಣ ನಿರ್ಮಿಸಲು ನಾವು ಶ್ರಮಿಸಿದ್ದೇವೆ ಎಂದರು.