ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದೇಶವನ್ನ ಕರ್ನಾಟಕದ ಜನತೆ ಸಹಿಸಲು ಸಾಧ್ಯವಿಲ್ಲ
ನವದೆಹಲಿ(ಸೆ.20): ಕರ್ನಾಟಕಕ್ಕೆ ಇದು ಕರಾಳ ದಿನ. ನೀರು ಬಿಡುವುದಕ್ಕೆ ನೀಡಿರುವ ಅದೇಶ ಆದು ತಾತ್ಕಾಲಿಕ. ಆದರೆ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದೇಶವನ್ನ ಕರ್ನಾಟಕದ ಜನತೆ ಸಹಿಸಲು ಸಾಧ್ಯವಿಲ್ಲ. ಜನರ ಕೈಯಲ್ಲಿ ಬೈಸಿಕೊಂಡು ಸುಪ್ರೀಂಕೋರ್ಟ್ ತೀರ್ಪನ್ನ ಪಾಲಿಸಿದ್ದೆವು. ಆದರೆ, ನ್ಯಾಯಪೀಠದಿಂದಲೇ ನಮಗೆ ಅನ್ಯಾಯವಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಾನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ, ಜನ ನಮಗೆ ಹೊಡೆಯುವುದೊಂದೇ ಬಾಕಿ, ಕಾನೂನು ತಂಡದ ಭಿಪ್ರಾಯ ಪಡೆದು ನಾಳೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
