ಮುಂಬೈ[ಜು.10]: ಅತೃಪ್ತರ ಮನವೊಲಿಸಲು ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ತೆರಳಿರುವ ಟ್ರಬಲ್ ಶೂಟರ್ ಅತೃಪ್ತರು ಉಳಿದುಕೊಂಡಿರುವ ಹೋಟೆಲ್ ಹೊರ ಭಾಗದಲ್ಲಿ ನಿಂತು ಶಾಸಕರನ್ನು ಭೇಟಿಯಾಗಲು ಕಾಯುತ್ತಿದ್ದಾರೆ. ಈಗಾಗಲೇ ಅವರ ಹೊಟೇಲ್ ಸಿಬ್ಬಂದಿ ಅವರ ಹೋಟೆಲ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದೆ. ಹೀಗಿದ್ದರೂ ಸೋಲೊಪ್ಪದ ಡಿಕೆ ಶಿವಕುಮಾರ್ ಮಳೆ ಸುರಿಯುತ್ತಿದ್ದರೂ ಹೋಟೆಲ್ ಹೊರಗೆ ನಿಂತಿದ್ದಾರೆ. 

"

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸತತ ಮೂರು ಗಂಟೆಯಿಂದ ಅತೃಪ್ತರನ್ನು ಭೇಟಿಯಾಗಲು ಡಿಕೆಶಿ ಪ್ರಯತ್ನಿಸುತ್ತಿದ್ದು, ಹೋಟೆಲ್ ಪ್ರವೇಶ ದ್ವಾರದ ಬಳಿಯೇ ನಿಂತಿದ್ದಾರೆ. ಬೆಳಗ್ಗೆ 7.45 ರಿಂದ ಹೋಟೆಲ್ ಬಳಿಯೇ ನಿಂತಿರುವ ಡಿಕೆಶಿ ಅತೃಪ್ತ ಶಾಸಕರಿಗಾಗಿ ಕಾದು ಸುಸ್ತಾ ರಸ್ತೆಯಲ್ಲೇ ನಿಂತು ತಿಂಡಿ ಸೇವಿಸಿದ್ದು ಕ್ಯಾಮರಾ ಕಣ್ಣಿನಲ್ಲೆ ಸೆರೆಯಾಗಿದೆ. ಹೌದು 'ಹಸಿವಾಗ್ತಿದೆ ತಿಂಡಿ ಕೊಡ್ರಪ್ಪಾ...!' ಎಂದ ಡಿಕೆಶಿ ರಸ್ತೆಯಲ್ಲೇ ನಿಂತು ಇಡ್ಲಿ- ವಡೆ ಸೇವಿಸಿದ್ದಾರೆ.

ಬಳಿಕ ಮಾತನಾಡಿದ ಅವರು 'ನಾನಿನ್ನೂ ಸ್ನಾನ ಮಾಡಿಲ್ಲ. ಬೆಳಿಗ್ಗೆಯಿಂದಲೇ ಹೋಟೆಲ್ ಹೊರಗೆ ಕಾಯುತ್ತಿದ್ದೇನೆ. ರೂಂ ಬುಕ್ ಮಾಡಿದ್ದರೂ ಕ್ಯಾನ್ಸಲ್ ಮಾಡಿದ್ದಾರೆ. ನಾನಿಲ್ಲಿ ನನ್ನ ಮಿತ್ರರನ್ನು ಭೇಟಿಯಾಗಲು ಬಂದಿದ್ದೇನೆ. ನಮ್ಮ ಶಾಸಕರು, ಕಾಂಗ್ರೆಸ್ ಪಕ್ಷದ ಶಾಸಕರನ್ನು ಭೇಟಿಯಾಗಲು ಬಂದಿದ್ದೇನೆ. ಬಿಜೆಪಿಗರನ್ನು ಭೇಟಿಯಾಗಲು ಬಂದಿಲ್ಲ' ಎಂದು ಕಿಡಿ ಕಾರಿದ್ದಾರೆ.