ಇಂಧನ ಸಚಿವ ಡಿಕೆ ಶಿವಕುಮಾರ್​​ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ಮಾಡಲು ಸಿಎಂ ಸಿದ್ದರಾಮಯ್ಯ ಕಾರಣ ಅಂತ ಡಿಕೆಶಿ ತಾಯಿ ಗೌರಮ್ಮ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು(ಆ.04): ಇಂಧನ ಸಚಿವ ಡಿಕೆ ಶಿವಕುಮಾರ್​​ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ಮಾಡಲು ಸಿಎಂ ಸಿದ್ದರಾಮಯ್ಯ ಕಾರಣ ಅಂತ ಡಿಕೆಶಿ ತಾಯಿ ಗೌರಮ್ಮ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಇಬ್ಬರು ಮಕ್ಕಳ ಬೆಂಬಲಕ್ಕೆ ಸಿಎಂ ಸಿದ್ದರಾಮಯ್ಯ ಎಂದು ನಿಂತಿಲ್ಲ. ನನ್ನ ಮಗನ ಮನೆ ಮೇಲೆ ದಾಳಿಯಾದಾಗ ಸಿದ್ದರಾಮಯ್ಯ ಯಾಕೆ ಪ್ರಶ್ನೆ ಮಾಡಲಿಲ್ಲ. ನನ್ನ ಮಕ್ಕಳ ಇಂದಿನ ಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ ನನ್ನ ಮಕ್ಕಳು ತಪ್ಪು ಮಾಡಿಲ್ಲ, ಜನರಿಗಾಗಿ ಮನೆಯವರನ್ನೆಲ್ಲ ಬಿಟ್ಟು ದುಡಿಯುತ್ತಿದ್ದಾರೆ. ನನ್ನ ಮಗ ಮುಖ್ಯಮಂತ್ರಿಯಾಗ್ತಾನೆ ಅಂತ ಹೀಗೆಲ್ಲಾ ಮಾಡಲಾಗುತ್ತಿದೆ. ಈ ದಾಳಿ ಹಿಂದೆ ಸಿದ್ದರಾಮಯ್ಯ ಕಾರಣ ಅಂತ ಡಿಕೆ ಶಿವಕುಮಾರ ತಾಯಿ ಗೌರಮ್ಮ ಗಂಭೀರ ಆರೋಪ ಮಾಡಿದ್ರು.