ನಮ್ಮ ಮಕ್ಕಳ ಬಗ್ಗೆ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದರು. ನಾನು ಸಹ ಎಲ್ಲದಕ್ಕೂ ಸಮರ್ಪಕವಾಗಿಯೇ ಉತ್ತರಿಸಿದೆ.
ಬೆಂಗಳೂರು(ಆ.03): ಕಳೆದ 2 ದಿನಗಳಿಂದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ್ದ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ದಾಳಿಗೆ ಯಾರು ಕಾರಣ, ಇದರ ಹಿಂದೆ ಯಾರಿದ್ದಾರೆ ಮುಂತಾದ ಮಾಹಿತಿಗಳನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.
ಅವರು ಹೇಳಿದ್ದ ಸಂಕ್ಷಿಪ್ತ ಸಾರಾಂಶ
'ಮೊದಲು ಆಗಮಿಸಿದ ಅವರು ತಮ್ಮ ಬಗ್ಗೆ ಪರಿಚಯ ಮಾಡಿಕೊಳ್ಳಲಿಲ್ಲ. ನಂತರ ಅರ್ಧ ಗಂಟೆ ನಂತರ ನಾವು ಐಟಿ ದಾಳಿ ನಡೆಸಲು ಬಂದೆದ್ದೇವೆ ಎಂದು ಹೇಳಿದರು. ಆಗಮಿಸಿದವರಲ್ಲಿ ಒಬ್ಬರು ಬಿಟ್ಟು ಉಳಿದವರಿಗೆ ಕನ್ನಡ ಬರುತ್ತಿರಲಿಲ್ಲ. ನಾನು ಕೂಡ ಹೆಚ್ಚು ಆಸಕ್ತಿ ತೋರದೆ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದು ಹೇಳಿದೆ. ನಮ್ಮ ಮಕ್ಕಳ ಬಗ್ಗೆ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದರು. ನಾನು ಸಹ ಎಲ್ಲದಕ್ಕೂ ಸಮರ್ಪಕವಾಗಿಯೇ ಉತ್ತರಿಸಿದೆ.
ನಂತರ ಪತ್ರಕ್ಕೆ ಸಹಿ ಹಾಕಿಸಿಕೊಂಡು. ಮನೆಯ ಇಂಚಿಂಚು ಬಿಡದೆ ಶೋಧನೆ ನಡೆಸಿದರು. ಸಂಜೆ 5.30ಕ್ಕೆ ಶುರುವಾದ ದಾಳಿ ಮುಗಿದಿದ್ದು ರಾತ್ರಿ 2.30ಕ್ಕೆ. ನಾವು ಯಾವುದೇ ತಪ್ಪು ಮಾಡಿಲ್ಲ ನನ್ನ ಮಕ್ಕಳು ತಪ್ಪು ಮಾಡಿಲ್ಲ. ರಾಜಕೀಯ ದ್ವೇಷಕ್ಕೆ ಇದನ್ನೆಲ್ಲ ಮಾಡಿದ್ದಾರೆ. ನಾಳೆ ಇದು ಅವರಿಗೂ ತಟ್ಟುತ್ತದೆ.ನನ್ನ ಮಕ್ಕಳು ಹೇಡಿಗಳಲ್ಲ. ಇದರ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.
ಈ ರೀತಿ ಮೂಸಂಡಿ ಕೆಲಸವನ್ನು ಮಾಡಿದವರು ಮುಠ್ಠಾಳರು. ಈ ಕೆಲಸವನ್ನು ಮಾಡಿರುವುದು ಮೋದಿ. ಮೋದಿ ಬಿಟ್ಟು ಮತ್ಯಾರು ಈ ಕೆಲಸವನ್ನು ಮಾಡಿಲ್ಲ. ಇಂದಲ್ಲ ನಾಳೆ ಮೋದಿ ಇದಕ್ಕೆ ಉತ್ತರ ಕೊಡಲೇಬೇಕಾಗುತ್ತದೆ. ನನ್ನ ಮಕ್ಕಳು ಜನಸೇವೆ ಬಿಟ್ಟು ಮತ್ತೇನು ಮಾಡಿಲ್ಲ. ಗುಜರಾತ್ ಶಾಸಕರಿಗೆ ಆಶ್ರಯ ನೀಡಿರುವುದೇ ಈ ದಾಳಿಗೆ ಪ್ರಮುಖ ಕಾರಣ.
ಪಕ್ಷ ಉಳಿಸಿಕೊಳ್ಳಲು ನನ್ನ ಮಕ್ಕಳು ದುಡಿದಿದ್ದಾರೆ. ದಾಳಿಯ ಹಿಂದೆ ಕಾಂಗ್ರೆಸ್ ಕೈವಾಡವಿದ್ದರೂ ಮೋದಿಯವರದೆ ಹೆಚ್ಚು ಪಾತ್ರವಿದೆ. ನನ್ನ ಚಿಕ್ಕ ಮಗ ಡಿ.ಕೆ. ಸುರೇಶ್ ಸಂಪರ್ಕಕ್ಕೆ ಸಿಕ್ಕಿದ್ದು, ನನಗೆ ದೈರ್ಯ ತುಂಬಿದ್ದಾನೆ. ನನ್ನ ಮಗ ಮುಂದೆ ಬರುವುದನ್ನು ಸಹಿಸದೆ ಈ ರೀತಿ ಮಾಡಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಇದಕ್ಕೆಲ್ಲ ನೇರ ಕಾರಣಕರ್ತರು.
