ಡಿಕೆಶಿ ಆಸ್ತಿಪಾಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವುದು ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷವು ಈ ಕ್ರಮವನ್ನು ಬಲವಾಗಿ ವಿರೋಧಿಸಿದೆ. ಡಿಕೆ ಶಿವಕುಮಾರ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆದರೆ, ಡಿಕೆಶಿ ಮತ್ತು ಕಾಂಗ್ರೆಸ್ಸಿಗರಿಗೆ ಜನಸಾಮಾನ್ಯರಿಂದ ಕೆಲ ಪ್ರಮುಖ ಪ್ರಶ್ನೆಗಳಿವೆ.
ಬೆಂಗಳೂರು: ಡಿಕೆಶಿ ಆಸ್ತಿಪಾಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವುದು ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷವು ಈ ಕ್ರಮವನ್ನು ಬಲವಾಗಿ ವಿರೋಧಿಸಿದೆ. ಡಿಕೆ ಶಿವಕುಮಾರ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆದರೆ, ಡಿಕೆಶಿ ಮತ್ತು ಕಾಂಗ್ರೆಸ್ಸಿಗರಿಗೆ ಜನಸಾಮಾನ್ಯರಿಂದ ಕೆಲ ಪ್ರಮುಖ ಪ್ರಶ್ನೆಗಳಿವೆ.
1) ಲೆಕ್ಕಪತ್ರ ಸರಿಯಾಗಿದ್ದರೆ, ಐಟಿಯವರಿಗೆ ಮುಕ್ತವಾಗಿ ತೋರಿಸಿ. ಏನು ಸಮಸ್ಯೆ..?
2) ಕೋಟಿಗಟ್ಟಲೆ ನಗದನ್ನು ಮನೆಯಲ್ಲಿಟ್ಟುಕೊಂಡಿರುವುದ ತಪ್ಪಲ್ಲವೇ..?
3) ಲಾಕರ್ಗಳ ಪಾಸ್ವರ್ಡ್ ನೀಡಿ ತನಿಖೆಗೆ ಸಹಕರಿಸುತ್ತಿಲ್ಲ. ಏಕೆ..?
4) ಕಾನೂನು ಬದ್ಧವಾಗಿ ತಪ್ಪಿಲ್ಲದಿದ್ದರೆ, ಉತ್ತರ ಕೊಡಲು ಹಿಂಜರಿಕೆ ಏಕೆ..?
5) ದಾಳಿ ನಡೆಯುತ್ತಿರುವಾಗ ಪ್ರತಿಭಟನೆ ನಡೆಸುವುದು ಒತ್ತಡ ತಂತ್ರವಾಗುವುದಿಲ್ಲವೇ..?
6) ದಿನವಿಡೀ ತನಿಖೆ ನಡೆದರೂ ಸ್ಪಷ್ಟತೆ ಸಿಗುತ್ತಿಲ್ಲ ಏಕೆ..?
