Asianet Suvarna News Asianet Suvarna News

ಡಿಕೆಶಿ ಇಮೇಜ್ ಡ್ಯಾಮೇಜ್: ಆಪ್ತನಿಗೆ ರಮೇಶ್ ಹರಿಹಾಯ್ದಿದ್ದು ಹೀಗೆ!

ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಇಮೇಜ್ ಡ್ಯಾಮೇಜ್?! ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಗರಂ! ರಮೇಶ್ ಜೊತೆ ಮಾತುಕತೆಗೆ ಮುಂದಾದ ಡಿಕೆಶಿ! ಡಿಕೆಶಿ ಆಪ್ತನಿಗೆ ರಮೇಶ್ ಫೋನ್ ನಲ್ಲಿ ತಪರಾಕಿ
 

ಬೆಂಗಳೂರು(ಸೆ.13): ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಇಮೇಜ್​​ಗೆ ಡ್ಯಾಮೇಜ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಡಿಕೆಶಿ ರಾಜಕಾರಣದಿಂದ ಇಷ್ಟೆಲ್ಲ ಆಗ್ತಿದೆ ಎಂದು ಹೈಕಮಾಂಡ್​ಗೆ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಜೊತೆ ಡಿ.ಕೆ. ಶಿವಕುಮಾರ್ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಮನೆಗೆ ಕರೆಸಿಕೊಂಡು ಎಲ್ಲಾ ಸರಿಹೋಗಿದೆ ಎಂದು ಡ್ಯಾಮೇಜ್​ ಕಂಟ್ರೋಲ್ ಮಾಡಲು ಡಿಕೆಶಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಸಚಿವ ಡಿ.ಕೆ.ಶಿವಕುಮಾರ್​​ ಪ್ಲಾನ್​​​ಗೆ ರಮೇಶ್ ಜಾರಕಿಹೊಳಿ ಸಾಥ್ ನೀಡಿಲ್ಲ ಎನ್ನಲಾಗಿದ್ದು,  ನಾನೇಕೆ ಡಿ.ಕೆ.ಶಿವಕುಮಾರ್ ಮನೆಗೆ ಹೋಗಲಿ ಎಂದು ರಮೇಶ್​ ಜಾರಕಿಹೊಳಿ ಹರಿಹಾಯ್ದಿದ್ದಾರೆ. 
ಸಮಸ್ಯೆ ಯಾರಿಂದ ಆಗಿದೆಯೋ ಅವರೇ ನಮ್ಮ ಮನೆಗೆ ಬರಲಿ ಎಂದು ರಮೇಶ್ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಡಿಕೆಶಿ ಆಪ್ತನ ಜೊತೆ ನಡೆದ ಸಂಭಾಷಣೆ ಕೂಡ ಬಹಿರಂಗಗೊಂಡಿದೆ.